ಹಿಜಾಬ್‌ ಧರಿಸಿಲ್ಲವೆಂದು ಬಂಧನಕ್ಕೊಳಗಾಗಿದ್ದ ಯುವತಿ ಅನುಮಾನಾಸ್ಪದವಾಗಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಹಿಜಾಬ್‌ ಧರಿಸಿಲ್ಲವೆಂದು ನೈತಿಕ ಪೊಲೀಸರಿಂದ ಟೆಹ್ರಾನ್‌ನಲ್ಲಿ ಬಂಧಿಸಲ್ಪಟ್ಟಿದ್ದ ಇರಾನ್ ಯುವತಿ ಪೊಲೀಸ್‌ ಕಸ್ಟಡಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
22 ವರ್ಷದ ಮಹ್ಸಾ ಅಮಿನಿ ತನ್ನ ಕುಟುಂಬದೊಂದಿಗೆ ಇರಾನ್ ರಾಜಧಾನಿಗೆ ಭೇಟಿ ನೀಡುತ್ತಿದ್ದಾಗ, ಇಸ್ಲಾಮಿಕ್ ಗಣರಾಜ್ಯದ ಮಹಿಳೆಯರಿಗೆ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಅನ್ನು ಜಾರಿಗೊಳಿಸುವ ಜವಾಬ್ದಾರಿ ಹೋಂದಿರುವ ನೈತಿಕ ಪೊಲೀಸ್ ಘಟಕವು ಆಕೆಯನ್ನು ಬಂಧಿಸಿತ್ತು. ಇರಾನ್‌ ನಲ್ಲಿ ಸಾರ್ವಜನಿಕವಾಗಿ ಹಿಜಾಬ್‌  ಧರಿಸುವುದು ಕಡ್ಡಾಯವಾಗಿದೆ.
ದುರದೃಷ್ಟವಶಾತ್ ಯುವತಿ ಪೊಲೀಸರ ವಶದಲಿದ್ದಾಗಲೇ ಮೃತಪಟ್ಟಿದ್ದಾಳೆ. ಆರೋಗ್ಯವಾಗಿದ್ದ ಅಮಿನಿ ಬಂಧನವಾದ ಕೆಲವೇ ಗಂಟೆಗಳ ನಂತರ ಕೋಮಾಕ್ಕೆ ಜಾರಿದ್ದಳು. ಆಕೆಯನ್ನು ಆ ಬಳಿಕ ಆಸ್ಪತ್ರೆಗೆ ಸಾಗಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾರೆ.
ಆಕೆ ಪೊಲೀಸ್ ಠಾಣೆಗೆ ಆಗಮಿಸುವ ಮತ್ತು ಆಸ್ಪತ್ರೆಗೆ ತೆರಳುವ ನಡುವೆ ಏನಾಯಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆಕೆಯ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ. ಆಕೆಯ ಅನುಮಾನಾಸ್ಪದ ಸಾವಿಗೆ ಕಾರಣರಾದವರನ್ನು ತಕ್ಷಣ ಬಂಧಿಸಸಬೇಕೆಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಆಕೆಯನ್ನು ದಾಖಲಿಸಿದ್ದ ಆಸ್ಪತ್ರೆಯ ಹೊರಗೆ ಜಮಾಯಿಸಿದ್ದ ಅಪಾರ ಸಂಖ್ಯೆಯ ಜನರು ಆಡಳಿತ ವಿರೋಧಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯವನ್ನು ಇರಾನ್ ಕೊನೆಗೊಳಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!