ಅಂಕೋಲಾದಲ್ಲಿ ಬಿರುಸಿನ ಸ್ವಚ್ಛತಾ ಕಾರ್ಯ

ಹೊಸದಿಗಂತ ವರದಿ ಅಂಕೋಲಾ:

ಪೌರಾಡಳಿತ ಬೆಂಗಳೂರು ಇವರ ನಿರ್ದೇಶನದಂತೆ ಅಂಕೋಲಾ ಪುರಸಭೆ ವತಿಯಿಂದ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರ ಸಹಯೋಗದಲ್ಲಿ ಪಟ್ಟಣದ ವಿವಿಧ ಕಡೆಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.
ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನದ ಆವರಣದಲ್ಲಿ ತಹಶೀಲ್ಧಾರ ಉದಯ ಕುಂಬಾರ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾ ಅಧಿಕಾರಿ ಪಿ ವೈ ಸಾವಂತ್, ಪುರಸಭೆ ಅಧ್ಯಕ್ಷೆ ಶಾಂತಲಾ ನಾಡಕರ್ಣಿ, ಮುಖ್ಯಾಧಿಕಾರಿ ಎನ್. ಎಂ.ಮೇಸ್ತ ಮತ್ತು ಪುರಸಭೆ ಸಿಬ್ಬಂದಿಗಳು ಸ್ವಚ್ಛತಾ ಕಾರ್ಯಕ್ರಮ ನಡೆಸಿ ಕಸ ಕಡ್ಡಿಗಳನ್ನು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಆಯ್ದು ಪುರಸಭೆ ವಾಹನಕ್ಕೆ ತುಂಬಿದರು.
ಲಯನ್ಸ್ ಕ್ಲಬ್ ಆಪ್ ಅಂಕೋಲಾ ಸಿಟಿಯ ಪದಾಧಿಕಾರಿಗಳು ಸಿಬ್ಬಂದಿಗಳು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವಚ್ಛತೆಗೆ ತಮ್ಮ ಸೇವೆ ಸಲ್ಲಿಸಿದರು.

ಆದೇ ರೀತಿ ಪಟ್ಟಣದ ಶ್ರೀಶಾಂತಾದುರ್ಗಾ ದೇವಾಲಯದ ರಸ್ತೆಯಲ್ಲಿ ಪುರಸಭೆ ಸದಸ್ಯರು ಸಿಬ್ಬಂದಿಗಳು ಸ್ಥಳೀಯರ ಸಹಕಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿ ಕ್ರಿಮಿ ನಾಶಕ, ಕೀಟ ನಾಶಕಗಳನ್ನು ಸಿಂಪಡಿಸಲಾಯಿತು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಮುಖಂಡ ಭಾಸ್ಕರ ನಾರ್ವೇಕರ್ ಮಾತನಾಡಿ ಪಟ್ಟಣದಲ್ಲಿ ಪರಿಸರವನ್ನು ಸ್ವಚ್ಚವಾಗಿರಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದ್ದು ಈ ದಿಶೆಯಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ವರ್ತಿಸಬೇಕು ಎಂದರು.

ಪುರಸಭೆ ಉಪಾಧ್ಯಕ್ಷೆ ರೇಖಾ ಗಾಂವಕರ್, ನಾಮ ನಿರ್ದೇಶಿತ ಸದಸ್ಯರುಗಳಾದ ತಾರಾ ಗಾಂವಕರ್, ಸುಲಕ್ಷಾ ಭೋವಿ, ಪುರಸಭೆ ಅಧಿಕಾರಿ ಎಲ್. ವಿ. ರಾಥೋಡ್, ಪುರಸಭೆ ಸಿಬ್ಬಂದಿಗಳು, ಸ್ಥಳೀಯ ವ್ಯಾಪಾರಸ್ಥರು ಮತ್ತು ನಿವಾಸಿಗಳು, ಕಾಲೇಜು ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!