ಕಾಲು ಜಾರಿ ಕೆರೆಗೆ ಬಿದ್ದ ಬಾಲಕಿ ಸಾವು, ನಿರ್ಲಕ್ಷ್ಯ ಖಂಡಿಸಿ ಬಳಗಾನೂರ ಗ್ರಾ.ಪಂ.ಗೆ ಮುತ್ತಿಗೆ

ಹೊಸದಿಗಂತ ವರದಿ ಗದಗ:

ನೀರು ತುಂಬಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದು ಬಾಲಕಿ ಮೃತಪಟ್ಟ ಘಟನೆ ಗದಗ ತಾಲೂಕಿ ಬಳಗಾನೂರ ಗ್ರಾಮದಲ್ಲಿ
ಬುಧವಾರ ಜರುಗಿದೆ.

ಬಳಗಾನೂರ ಗ್ರಾಮದ ಭುವನೇಶ್ವರಿ ಚಟ್ರಿ ಎಂಬ ಹನ್ನೆರೆಡು ವರ್ಷದ ಬಾಲಕಿ ಬೆಳಿಗ್ಗೆ 9 ಗಂಟೆಗೆ ಗ್ರಾಮದಲ್ಲಿನ‌ ಕೆರೆಗೆ ಕುಡಿಯುವ ನೀರು ತರಲು ಹೋದಾಗ ಆಕಸ್ಮಿಕ ವಾಗಿ ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾಳೆ.

ಬಳಗಾನೂರ ಗ್ರಾಮದ ಈ ಕೆರೆಗೆ ತಂತಿ ಬೇಲಿ ಮತ್ತು ಮೆಟ್ಟಿಲುಗಳನ್ನು ಕಟ್ಟಿಸಿ ಸ್ವಚ್ಛತೆ ಕಾಪಾಡಿ, ಕರೆಯ ಪಕ್ಕ ಮಲಮೂತ್ರ ವಿಸರ್ಜನೆ ಮಾಡುವುದನ್ನು ನಿಷೇಧಿಸಬೆಕೆಂದು ಗ್ರಾಮಸ್ಥರು ಹಲವಾರು ಬಾರಿ ಮನವಿ ಮಾಡಿದ್ದರು. ಆದರೆ, ಇದುವರೆಗೂ ಯಾವುದೇ ಕ್ರಮಕೈಗೊಳ್ಳದೆ ಗ್ರಾಮ ಪಂಚಾಯತಿ ನಿರ್ಲಕ್ಷ ವಹಿಸಿದ್ದೇ ಇದಕ್ಕೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!