USEFULL INFO| ಮೊಬೈಲ್ ಕವರ್ ಹಿಂಬದಿಯಲ್ಲಿ ದುಡ್ಡಿಡೋ ಅಭ್ಯಾಸ ಇದೆಯಾ? ಹಾಗಿದ್ರೆ ಇದನ್ನು ಓದಿ..

ಆನ್‌ಲೈನ್ ಬೇಡ ಕ್ಯಾಶ್ ಕೊಡಿ ಎಂದು ಅಂಗಡಿಯವರು ಹೇಳಿದಾಗ ಪರ್ಸ್ ಮರೆತುಹೋಯ್ತು ಛೆ ಅಂದ್ಕೊಳ್ತೀರಿ, ಆದ್ರೇನಾಯ್ತು? ಫೋನ್ ಹಿಂಬದಿಯಲ್ಲಿ ದುಡ್ಡಿದೆಯಲ್ಲಾ? ಇಂಥ ಎಮರ್ಜೆನ್ಸಿಗಾಗಿಯೇ ಹಣವನ್ನು ಫೋನ್ ಕವರ್ ಹಿಂಬದಿಯಲ್ಲಿ ಇಟ್ಟಿರ‍್ತೀರಿ..

ಇದು ಒಬ್ಬಿಬ್ಬರ ಕಥೆ ಅಲ್ಲ, ಸಾಕಷ್ಟು ಮಂದಿ ಈ ರೀತಿ ಮಾಡ್ತಾರೆ ಆದರೆ ಇದರಿಂದ ಸಮಸ್ಯೆ ತಪ್ಪಿದ್ದಲ್ಲಾ, ಹೇಗೆ ನೋಡಿ..

ನಿಮ್ಮ ಮೊಬೈಲ್ ಬಳಕೆ ಮಾಡುತ್ತಾ ಮಾಡುತ್ತಾ ಬಿಸಿ ಆಗೋದನ್ನು ಗಮನಿಸಿದ್ದೀರಾ? ಈ ರೀತಿ ಹೆಚ್ಚಾಗಿರುವ ಬಿಸಿ ಹೊರಗೆ ಹೋಗೋಕೆ ಜಾಗ ಆಗೋದಿಲ್ಲ, ಟೈಟ್ ಆದ ಫೋನ್ ಕವರ್ ಜೊತೆಗೆ ಕಾಗದ ಬೇರೆ ಇದ್ದರೆ ಫೋನ್ ಎಕ್ಸ್‌ಪ್ಲೋಡ್ ಆಗುವ ಸಾಧ್ಯತೆ ಇದೆ. ಜೀವಕ್ಕೆ ತೊಂದರೆಯಾಗುತ್ತದೆ.

ಇನ್ನು ದುಡ್ಡು ಕಾಗದವೇ ಇರಬಹುದು, ಆದರೆ ಅದರಲ್ಲಿ ವಿಭಿನ್ನ ಕೆಮಿಕಲ್‌ಗಳಿವೆ. ಬಿಸಿಯ ಜೊತೆ ಕೆಮಿಕಲ್ ರಿಯಾಕ್ಟ್ ಆಗಿ ಬ್ಲಾಸ್ಟ್ ಆಗಲು ಸಹಾಯ ಮಾಡುತ್ತವೆ. ನಿಮ್ಮ ನಿರ್ಲಕ್ಷ್ಯದಿಂದ ನಿಮಗೆ ಅಥವಾ ನಿಮ್ಮವರಿಗೆ ಕುತ್ತು ಬರುವ ಸಾಧ್ಯತೆ ಇದೆ. ಹೀಗಾಗಿ ದುಡ್ಡು ಇಡುವ ಮುನ್ನ ಒಮ್ಮೆ ಆಲೋಚಿಸಿ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!