ಪಕ್ಷೇತರರಾಗಿ ಸ್ಪರ್ಧಿಸುವೇ ಎಂಬ ನಿಮ್ಮ ಬ್ಲ್ಯಾಕ್‌ಮೇಲ್‌ ನನ್ನ ಮುಂದೆ ನಡೆಯಲ್ಲ: ರೇವಣ್ಣ ಕುಟುಂಬಕ್ಕೆ ಕುಮಾರಸ್ವಾಮಿ ತಿರುಗೇಟು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಾಸನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಜೆಡಿಎಸ್‌ ಗೆ ದೊಡ್ಡ ತಲೆನೋವು ವಾಗಿದ್ದು, ಯಾರಿಗೆ ನೀಡಲಿ ಎಂಬ ಗೊಂದಲ ನಡುವೆ , ಟಿಕೆಟ್‌ (Hasana Politics) ನೀಡದಿದ್ದರೆ ಪಕ್ಷೇತರರಾಗಿ ಸ್ಪರ್ಧಿಸುವ ಚಿಂತನೆ ನಡೆಸಲಾಗುತ್ತಿದೆ ಎಂಬ ವರಸೆ ಪ್ರದರ್ಶಿಸಿದ ಎಚ್‌.ಡಿ ರೇವಣ್ಣ ಕುಟುಂಬಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ನಿಮ್ಮ ಬ್ಲ್ಯಾಕ್‌ಮೇಲ್‌ ಕುಮಾರಸ್ವಾಮಿ ಮುಂದೆ ನಡೆಯಲ್ಲ ಎಂದು ನೇರವಾಗಿ ಹೇಳಿದ್ದಾರೆ.

ಪಕ್ಷೇತರ ಎಂಬ ಬ್ಲಾಕ್‌ಮೇಲ್‌ ನನ್ನ ಹತ್ರ ನಡೆಯಲ್ಲ. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಒಬ್ಬ ಕಾರ್ಯಕರ್ತ ಎಂದು ನಾನು ನಿರಂತರವಾಗಿ ಹೇಳುತ್ತಿದ್ದೇನೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಕಾರ್ಯಕರ್ತ ಯಾರು ಸಮರ್ಥವಾಗಿದ್ದಾರೆ ಅಂತ ನನಗೂ ಗೊತ್ತು, ನಿಮಗೂ ಗೊತ್ತು. ಕಾರ್ಯಕರ್ತರೇ ಯಾರಿಗೆ ಟಿಕೆಟ್ ಅಂತ ಹೆಸರು ಕೂಗುತ್ತಿದ್ದಾರೆ. ಟಿಕೆಟ್‌ ಯಾರಿಗೆ ಎನ್ನುವುದು ತೀರ್ಮಾನವಾಗಿದೆ. ಸದ್ಯದಲ್ಲೇ ಘೋಷಣೆ ಕೂಡಾ ಆಗಲಿದೆ. ಯಾವ ಆತಂಕವೂ ಬೇಡʼ ಎಂದು ಅವರು ಹೇಳಿದರು.

ʻನನ್ನ ಪಕ್ಷದ ಜವಾಬ್ದಾರಿ ಬಳಿಕ ನನಗೆ ಕಾರ್ಯಕರ್ತ ಮುಖ್ಯ. ಎಲ್ಲರನ್ನೂ ಒಂದುಗೂಡಿಸಿ ಇಲ್ಲಿಯವರೆಗೂ ಉಳಿಸಿಕೊಂಡು ಬಂದಿದ್ದೇವೆ. ಅತ್ಯಂತ ತಾಳ್ಮೆಯಿಂದ ನಡೆದುಕೊಂಡಿದ್ದೇನೆ. ಯಾವುದೇ ಬ್ಲಾಕ್‌ಮೇಲ್‌ಗೆ ಹಿಂದೆ ಸರಿಯಲ್ಲ. ಪಕ್ಷೇತರವಾಗಿ ನಿಲ್ತೀನಿ ಅಂತ ದೇವೆಗೌಡರಿಗೆ ಎಮೋಷನಲ್ ಬ್ಲಾಕ್‌ಮೇಲ್ ಮಾಡಬಹುದು. ಅದೆಲ್ಲ ಈ ಕುಮಾರಸ್ವಾಮಿ ಹತ್ರ ನಡೆಯುವುದಿಲ್ಲ ಎಂದು ಹೇಳಿದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!