August 4, 2026
Tuesday, August 4, 2026
spot_img

ʼಕೈ ಮುಗಿದು ಕೇಳ್ತೀನಿ ಇದನ್ನೆಲ್ಲಾ ಇಲ್ಲೇ ನಿಲ್ಲಿಸಿ, ಹೃದಯಕ್ಕೆ ಹತ್ತಿರವಾದ ವ್ಯಕ್ತಿಯನ್ನು ಕಳೆದುಕೊಂಡಿದ್ದೀನಿʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ಕೃಷಿ ತಾಪಂಡ ಮನೆಯಲ್ಲಿ ಉದ್ಯಮಿ ವೈಶಾಖ್‌ ಆತ್ಮಹತ್ಯೆಯ ನಂತರ ನಟಿ ಹಾಗೂ ಮೃತ ವ್ಯಕ್ತಿಯ ರಿಲೇಷನ್‌ಶಿಪ್‌ ಎಂಥದ್ದು ಎನ್ನುವ ಬಗೆಗಿನ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಟಿ ಕೃಷಿ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾದ ಪೋಸ್ಟ್‌ ಒಂದನ್ನು ಮಾಡಿದ್ದಾರೆ.

ಈ ರೀತಿ ಏನಾದ್ರೂ ಬರೆಯುತ್ತೇನೆ ಎಂದು ಅಂದುಕೊಂಡೇ ಇರಲಿಲ್ಲ. ಈ ಪೋಸ್ಟ್‌ಗೆ ಬೇಕಾಗಿರುವ ಮನಸ್ಥಿತಿ, ಶಕ್ತಿ ಎರಡೂ ನನ್ನಲ್ಲಿಲ್ಲ. ಆದರೆ ಸಾಮಾಜಿಕ ಜಾಲತಾಣ, ಕೆಲ ಮಾಧ್ಯಮಗಳಲ್ಲಿ ನನ್ನ ಬಗ್ಗೆ ಬರುತ್ತಿರುವ ಸುದ್ದಿಗಳನ್ನು ನೋಡಿ ಈ ಪೋಸ್ಟ್‌ ಬರೆಯಲೇಬೇಕಾಯ್ತು. ನನ್ನ ಕುಟುಂಬ, ವೈಶಾಖ್‌ ಕುಟುಂಬ, ನಮ್ಮ ಸ್ನೇಹಿತರು ನಿಮ್ಮ ಪ್ರಶ್ನೆಗಳಿಂದ ನೋವು ಅನುಭವಿಸ್ತಾ ಇದ್ದಾರೆ.

ಈ ಕೆಲ ದಿನಗಳಲ್ಲಿ ನನ್ನ ಜೀವನ ಇಮ್ಯಾಜಿನ್‌ ಮಾಡಿರದ ರೀತಿಯಲ್ಲಿ ಬದಲಾಗಿದೆ. ಈ ಜರ್ನಿಯಲ್ಲಿ ನನ್ನ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದೇನೆ. ಈಗ ವೈಶಾಖ್‌ರನ್ನು ಕಳೆದುಕೊಂಡಿದ್ದೇನೆ. ಆ ವ್ಯಕ್ತಿ ಪ್ರತಿ ಸಂದರ್ಭದಲ್ಲಿಯೂ ನನ್ನ ಪರವಾಗಿ ನಿಂತಿದ್ದರು, ನನ್ನನ್ನು ರಕ್ಷಿಸಿದ್ದರು, ಕಾಳಜಿ ವಹಿಸುತ್ತಿದ್ದ ಜೀವ ಅದು. ಇಂಥ ವ್ಯಕ್ತಿಯನ್ನು ಕಳೆದುಕೊಂಡಿದ್ದೇನೆ ಅನ್ನೋದನ್ನು ನಂಬೋಕೆ ಆಗ್ತಿಲ್ಲ. ಮೊದಲೇ ನೋವಿನಲ್ಲಿದ್ದ ನನಗೆ ಗಾಯದ ಮೇಲೆ ಬರೆ ಹಾಕಿದಂತಾಗಿದೆ.

https://www.instagram.com/p/DaIx4pfAUAy/?utm_source=ig_embed&ig_rid=A3VvdaA577wqPv6kT4QQV1X

ಇಂಥ ಸಂದರ್ಭದಲ್ಲಿ ನನಗೆ ಅಳೋಕೂ ಬಿಡದೇ, ಸಂಕಟ ಪಡೋಕೂ ಬಿಡದೇ ಮುಖಕ್ಕೆ ಕ್ಯಾಮರಾ ಇಡುತ್ತಿದ್ದಾರೆ. ಆತನ ಕುಟುಂಬ, ಸ್ನೇಹಿತರು ಈ ಕಷ್ಟದ ಸಂದರ್ಭದಿಂದ ದುಃಖದಲ್ಲಿದ್ದಾರೆ. ಆದರೆ ಮೀಡಿಯಾಗಳು ಹಾಗೂ ಸೋಶಿಯಲ್‌ ಮೀಡಿಯಾಗಳಲ್ಲಿ ಬರುತ್ತಿರುವ ಪೋಸ್ಟ್‌, ಸುದ್ದಿ, ಕಮೆಂಟ್ಸ್‌ ಅಸಹ್ಯಕರವಾಗಿದೆ. ಒಬ್ಬರ ಸಾವನ್ನು ಹೆಡ್‌ಲೈನ್‌ ಮಾಡೊದು ಸರಿ ಅಲ್ಲ. ಕೆಲವು ಮೀಡಿಯಾಗಳು ಮಾತ್ರ ಇರುವ ಸತ್ಯವನ್ನು ಸೂಕ್ಷ್ಮತೆಯಿಂದ ತೋರಿಸ್ತಿವೆ. ಸತ್ತ ವ್ಯಕ್ತಿಯನ್ನು ನೋಡಿ ಬಂದವರ ಮುಂದೆ ಮುಖಕ್ಕೆ ಮೈಕ್‌ ಹಿಡಿದು ಹೇಗೆ ಅನಿಸ್ತಾ ಇದೆ? ಅಂತ ಕೇಳಿದ್ರೆ ಏನು ಉತ್ತರ ಕೊಡೋದು? ಹೇಗಿದ್ದೀರ ಅಂತ ಒಬ್ರಾದ್ರೂ ಕೇಳಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

ಇನ್ನು ಕೆಲವಷ್ಟು ಕರುಣಾಕರ ಹೃದಯಗಳು ನನಗೆ ಕರೆ ಮಾಡೋಕೆ, ಮೆಸೇಜ್‌ ಮಾಡೋಕೆ ಪ್ರಯತ್ನಿಸಿದ್ದೀರಿ. ನಿಮ್ಮ ಮೆಸೇಜ್‌ಗಳಿಗೆ ಉತ್ತರಿಸೋಕೆ ನನಗಿನ್ನೂ ಶಕ್ತಿ ಬಂದಿಲ್ಲ. ಆದರೆ ನಿಮ್ಮಂತಹ ಉತ್ತಮರ ಜತೆ ಇರೋದು ತೃಪ್ತಿ ನೀಡಿದೆ. ಈಗ ಸಧ್ಯಕ್ಕೆ ಸ್ನೇಹಿತರು ಜೊತೆಯಲ್ಲಿದ್ದಾರೆ. ಈ ಸಂದರ್ಭದಿಂದ ಮುನ್ನಡೆಯೋಕೆ ಪ್ರಯತ್ನಿಸುತ್ತಿದ್ದೀನಿ. ನಿಮ್ಮಿಂದ ಯಾರನ್ನಾದ್ರೂ ನಗಿಸೋಕೆ ಆಗ್ತಿಲ್ಲ ಅಂದ್ರೂ ಪರವಾಗಿಲ್ಲ ಆದರೆ ಅಳಿಸಬೇಡಿ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !