ಬಸ್ ನಿಲ್ಲಿಸಿ ಅಪ್ರಾಪ್ತೆಯ ಕತ್ತು ಕೊಯ್ದ ಯುವಕರು‌: ಬಾಲಕಿಯ ಸ್ಥಿತಿ ಗಂಭೀರ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸಿನಿಮೀಯ ರೀತಿಯಲ್ಲಿ ಯುವಕರು‌ ಅಪ್ರಾಪ್ತ ವಯಸ್ಕ ಯುವತಿಯ ಕತ್ತು ಕೊಯ್ದ ಘಟನೆ ಕಲಬುರಗಿ ಜಿಲ್ಲೆಯ ಅಟ್ಟೂರ ಕ್ರಾಸ್ ಬಳಿ ನಡೆದಿದೆ. ಗಾಯಗೊಂಡ ಬಾಲಕಿ ಅಂಬಿಕಾ ಕಾರಬಾರಿ ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಲಬುರಗಿ ಜಿಲ್ಲೆಯ ಅಟ್ಟೂರು ಕ್ರಾಸ್ ಬಳಿಯಲ್ಲಿ ಬೆಳಮಗಿ ಗ್ರಾಮದಿಂದ ವಿಕೆ ಸಲಗಕ್ಕೆ ಅಪ್ರಾಪ್ತ ಯುವತಿ ತೆರಳುತ್ತಿದ್ದರು. ಈ ಬಸ್ ಅನ್ನು ಬೈಕ್ ನಲ್ಲಿ ಹಿಂಬಾಲಿಸಿ ತೆರಳಿದ ಯುವಕರು, ಬಸ್ ನಿಲ್ಲಿಸಿ ಅಪ್ರಾಪ್ತೆಯ ಕತ್ತು ಕೊಯ್ದು ಪರಾರಿಯಾಗಿದ್ದಾರೆ.

ತೀವ್ರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಬಾಲಕಿಯ ಸ್ಥಿತಿ ಗಂಭೀರವಾಗಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ನರೋಣ ಠಾಣೆಯ ಪೊಲೀಸರು, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!