ಯೂಟ್ಯೂಬ್ ಸಮುದಾಯ ಮಾರ್ಗಸೂಚಿ ಉಲ್ಲಂಘನೆ: ಸಂಸದ್ ಟಿವಿ ಯೂಟ್ಯೂಬ್ ಖಾತೆ ರದ್ದು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂಸತ್ತಿನ ಅಧಿವೇಶನದಲ್ಲಿ ರಾಜ್ಯಸಭೆ ಮತ್ತು ಲೋಕಸಭೆಯ ಕಲಾಪಗಳನ್ನು ಪ್ರಸಾರ ಮಾಡುವ ಸಂಸದ್ ಟಿವಿಯ ಯೂಟ್ಯೂಬ್ ಖಾತೆಯನ್ನು ರದ್ದುಗೊಳಿಸಲಾಗಿದೆ.

ಯೂಟ್ಯೂಬ್‌ನ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ಖಾತೆಯನ್ನು ರದ್ದುಮಾಡಲಾಗಿದೆ. ಚಾನೆಲ್‌ನ್ನು ಪ್ರವೇಶಿಸಲು ಯತ್ನಿಸಿದಾಗ, ಯೂಟ್ಯೂಬ್‌ನ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ಖಾತೆಯನ್ನು ರದ್ದು ಮಾಡಲಾಗಿದೆ ಎನ್ನುವ ವಿಂಡೋ ಕಾಣಿಸುತ್ತದೆ. ಇದರ ಸ್ಕ್ರೀನ್‌ಶಾಟ್ ತೆಗೆದುನ್ನು ಟ್ವಿಟರ್ ಬಳಕೆದಾರರು ಪೋಸ್ಟ್ ಮಾಡಿದ್ದಾರೆ.

ಆದರೆ ಸಂಸದ್ ಟಿವಿಯ ಯುಟ್ಯೂಬ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಹಾಗೂ ಹೆಸರನ್ನು ಇಥೆರಿಯಮ್ ಎಂದು ಬದಲಾಯಿಸಲಾಗಿದೆ ಎಂದು ದಿ ಕ್ವಿಂಟ್ ವರದಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!