ವೈಎಸ್ ಆರ್ ಪಕ್ಷದ ‘ಲಕ್ಕಿ ಚಾರ್ಮ್’ ಗೆ ಕೊನೆಗೂ ಸಿಕ್ತು ಸಚಿವ ಸ್ಥಾನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ತಮ್ಮ ಸಚಿವ ಸಂಪುಟ ಪುನರ್ ರಚನೆ ಮಾಡಿದ್ದು, ನಟಿ, ವೈಎಸ್ಸಾರ್ ಸಿಪಿ ನಾಯಕಿ ರೋಜಾ ಅವರಿಗೆ ಕೊನೆಗೂ ಮಂತ್ರಿ ಸ್ಥಾನ ಸಿಕ್ಕಿದೆ.
ವೈಎಸ್ಸಾರ್ ಸಿಪಿ ನಾಯಕಿ ರೋಜಾ ಅವರು ನಗರಿ ವಿಧಾನಸಭಾ ಕ್ಷೇತ್ರದಿಂದ ಮರು ಆಯ್ಕೆಯಾದರೂ ಸಚಿವ ಸ್ಥಾನ ಸಿಕ್ಕಿರಲಿಲ್ಲ, ಆದರೆ, ಕೆಬಿಗೂ ಇಂದು ಮಂತ್ರಿ ಪದವಿ ದೊರೆತ ವೈಎಸ್ಸಾರ್ ಪಕ್ಷದ ‘ಲಕ್ಕಿ ಚಾರ್ಮ್’ ಎಂದು ಹೇಳಿಕೊಳ್ಳುತ್ತಿದ್ದ ರೋಜಾ ಸೆಲ್ವಮಣಿ ಇಂದುಭಾವನಾತ್ಮಕವಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದಲ್ಲದೆ ಸಿಎಂ ಜಗನ್ ಅವರಿಗೆ ಮುತ್ತು ನೀಡಿ, ಧನ್ಯವಾದ ಅರ್ಪಿಸಿದ್ದಾರೆ.
ಭರವಸೆ ನೀಡಿದಂತೆ ಎಲ್ಲಾ ಸಮುದಾಯ, ಹೊಸ ಜಿಲ್ಲೆ, ಹೊಸ ಮುಖಗಳಿಗೆ ಸಿಎಂ ಜಗನ್ ಆದ್ಯತೆ ನೀಡಿದ್ದಾರೆ. ಹೊಸ ಸಚಿವ ಸಂಪುಟದಲ್ಲಿ 25 ಮಂದಿಗೆ ಸ್ಥಾನ ಕಲ್ಪಿಸಲಾಗಿದೆ. ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಂಡ, ಅಲ್ಪ ಸಂಖ್ಯಾತರು ಹೀಗೆ ಮೀಸಲು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಶಾಸಕರಾದವರಿಗೆ ಆದ್ಯತೆ ನೀಡಿ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ವೈಯಕ್ತಿಕ ನಿಂದನೆ, ನೋವು, ಅವಮಾನಗಳನ್ನು ಸಹಿಸಿಕೊಂಡು ತಾಳ್ಮೆಯಿಂದ ಕಾದಿದ್ದ ರೋಜಾಗೆ ಇಂದು ಕೊನೆಗೂ ಸಚಿವ ಸ್ಥಾನ ಸಿಕ್ಕಿದೆ. ಮೂಲಗಳ ಪ್ರಕಾರ ಭರ್ಜರಿ ಖಾತೆಯೂ ದಕ್ಕುವ ಸಾಧ್ಯತೆಯಿದೆ.
ಪೂರ್ವ ನಿಯೋಜಿತ ಮುಹೂರ್ತದ ಪ್ರಕಾರ ಸರಿಯಾಗಿ 11.31ಕ್ಕೆ ಸಚಿವರ ಪ್ರಮಾಣ ವಚನ ಆರಂಭವಾಯಿತು. ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ರೋಜಾ ಭಾವುಕರಾಗಿದ್ದರು. ಆರ್ ಕೆ ರೋಜಾ ಎಂಬ ಹೆಸರಿನ ನಾನು ಎಂದು ತೆಲುಗು ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿ, ಕಣ್ಣೀರನ್ನು ಕಂಟ್ರೋಲ್ ಮಾಡುತ್ತಾ ಜಗನ್ ಬಳಿ ತೆರಳಿ ಕಾಲಿಗೆರಗಿ, ಜಗನ್ ಕೈ ಹಿಡಿದು ಪ್ರೀತಿಯಿಂದ ಮುತ್ತಿಕ್ಕಿ, ಸಚಿವ ಸ್ಥಾನ ನೀಡಿದ್ದಕ್ಕೆ ಧನ್ಯವಾದ ಅರ್ಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!