July 26, 2026
Sunday, July 26, 2026
spot_img

Yummy | ಸನ್‌ಡೇ ಸ್ಪೆಷಲ್ ಅಡುಗೆಗೆ ಬೆಸ್ಟ್: ಕ್ರೀಮಿ & ಟೇಸ್ಟಿ ಬಟರ್ ಚಿಕನ್!

ಭಾನುವಾರದ ಊಟಕ್ಕೆ ಏನಾದರೂ ವಿಶೇಷವಾಗಿ ಮಾಡಬೇಕೇ? ಹಾಗಿದ್ದರೆ ರೆಸ್ಟೋರೆಂಟ್ ಸ್ಟೈಲ್ ಕ್ರೀಮಿ ಮತ್ತು ರುಚಿಯಾದ ಬಟರ್ ಚಿಕನ್ ಈಗಾ ಮನೆಯಲ್ಲೇ ಮಾಡಬಹುದು

ಬೇಕಾಗುವ ಸಾಮಗ್ರಗಳು:

ಚಿಕನ್

ಮೊಸರು

ಶುಂಠಿ-ಬೆಳ್ಳುಳ್ಳಿ

ಖಾರದ ಪುಡಿ

ಉಪ್ಪು

ನಿಂಬೆ ರಸ

ಈರುಳ್ಳಿ

ಟೊಮೆಟೊ

ಗೋಡಂಬಿ

ಬೆಣ್ಣೆ

ಫ್ರೆಶ್ ಕ್ರೀಮ್

ಕಸ್ತೂರಿ ಮೇತಿ

 ಗರಂ ಮಸಾಲಾ

ಮಾಡುವ ವಿಧಾನ

ತೊಳೆದ ಚಿಕನ್‌ಗೆ ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಉಪ್ಪು ಮತ್ತು ನಿಂಬೆ ರಸ ಹಾಕಿ ಚೆನ್ನಾಗಿ ಕಲಸಿ. ಇದನ್ನು20ನಿಮಿಷ ನೆನೆಯಲು ಬಿಡಬೇಕು. ನಂತರ ಒಂದು ಬಾಣಲಿಗೆ 1 ಚಮಚ ಎಣ್ಣೆ ಮತ್ತು 1 ಚಮಚ ಬೆಣ್ಣೆ ಹಾಕಿ. ಅದಕ್ಕೆ ಕತ್ತರಿಸಿದ ಈರುಳ್ಳಿ, ಟೊಮೆಟೊ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಗೋಡಂಬಿ ಹಾಕಿ ಮೆತ್ತಗಾಗುವವರೆಗೆ ಚೆನ್ನಾಗಿ ಹುರಿಯಿರಿ. ಇದು ತಣ್ಣಗಾದ ನಂತರ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಬೇಕು.

ಅದೇ ಬಾಣಲಿಗೆ 1ಚಮಚ ಬೆಣ್ಣೆ ಹಾಕಿ, ಮ್ಯಾರಿನೇಟ್ ಮಾಡಿದ ಚಿಕನ್ ತುಂಡುಗಳನ್ನು ಇಟ್ಟು, ಎರಡು ಕಡೆ ತಿಳಿ ಕಂದು ಬಣ್ಣ ಬರುವವರೆಗೆ ಮಧ್ಯಮ ಉರಿಯಲ್ಲಿ ಫ್ರೈ ಮಾಡಿ ಒಂದು ತಟ್ಟೆಗೆ ತೆಗೆದಿಟ್ಟುಕೊಳ್ಳಬೇಕು. ಬಾಣಲಿಗೆ ಉಳಿದ ಬೆಣ್ಣೆಯನ್ನು ಹಾಕಿ, ಸಿದ್ಧಪಡಿಸಿದ ಟೊಮೆಟೊ-ಈರುಳ್ಳಿ ಪೇಸ್ಟ್ ಅನ್ನು ಸೇರಿಸಿ 2 ನಿಮಿಷ ಕುದಿಸಿ. ಇದಕ್ಕೆ ಸ್ವಲ್ಪ ಖಾರದ ಪುಡಿ ಮತ್ತು ಗರಂ ಮಸಾಲಾ ಹಾಕಿ. ಫ್ರೈ ಮಾಡಿದ ಚಿಕನ್ ತುಂಡುಗಳನ್ನು ಗ್ರೇವಿಗೆ ಹಾಕಿ, ಅರ್ಧ ಕಪ್ ನೀರು ಸೇರಿಸಿ, ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 10 ನಿಮಿಷ ಬೇಯಿಸಿ. ಫ್ರೆಶ್ ಕ್ರೀಮ್ ಮತ್ತು ಉಜ್ಜಿದ ಕಸ್ತೂರಿ ಮೇತಿ ಉದುರಿಸಿ ಮಿಕ್ಸ್ ಮಾಡಿದರೆ, ಘಮಘಮಿಸುವ ಬಟರ್ ಚಿಕನ್ ಸವಿಯಲು ಸಿದ್ಧ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !