ಯುವಜನೋತ್ಸವ: ಆಹಾರ ಪ್ರಿಯರ ಸ್ವರ್ಗವೆನಿಸಿತು ದೇಸಿ ಸೊಗಡಿನ ಖಾದ್ಯಗಳು!

ಹೊಸದಿಗಂತ ವರದಿ,ಧಾರವಾಡ:

ಪೇಢಾ ನಗರಿಯಲ್ಲಿ ನಡೆಯುತ್ತಿರುವ 26ನೇ ರಾಷ್ಟ್ರೀಯ ಯುವಜನೋತ್ಸವದ ಆಹಾರ ಮೇಳದಲ್ಲಿ ವಿವಿಧ ರಾಜ್ಯಗಳ ವಿಶೇಷ ತಿನಿಸುಗಳನ್ನು ಜನರು ಆಸ್ವಾದಿಸಿ ಸಂತಸ ವ್ಯಕ್ತಪಡಿಸಿದರು.

ಕೇರಳದ ಪಾಯಸಂ, ಸಿಹಿ-ಖಾರದ ಬಾಳೆಕಾಯಿ ಭಜಿ, ಜಿಂಜರ್ ಟೀ, ಅವಿಲ್ ನನ್ನಚೆಡ್ (ಸಿಹಿ ಅವಲಕ್ಕಿ), ಮಸಾಲಾ ಮಜ್ಜಿಗೆ, ಗುಜರಾತನ ಭಾಪ್ಲಾ, ಢೋಕ್ಲಾ, ಕಾಖ್ರಾ, ಕಾಶ್ಮೀರದ ಕೇವ (ಕೇಸರಿ ಚಹ), ಒಡಿಸ್ಸಾ ಬಡಾ, ಲಾಂಗ್, ಗಜಾ (ಸಿಹಿ-ಖಾರದ ಭಜಿಗಳು) ನಾಲಿಗೆಗಲಿಗೆ ಉತ್ಕೃಷ್ಟ ನೀಡಿದವು. ಶಾಖಾಹಾರಿ ಒಂದೆಡೆ ಆದರೆ, ಮಾಂಸಾಹರದಲ್ಲಿ ಮಣಿಪುರದ ಜಪಾನೀಸ್ ಕುಹು ಕುಹು (ಪುಟ್ಟು), ಉತ್ತರ ಪ್ರದೇಶದ ವಿಶೇಷ ಚಿಕನ್ ಬಿರಿಯಾನಿ, ಗೋವಾ ಮತ್ಸ್ಯ ಖಾದ್ಯಗಳು ಜನರನ್ನು ಆಕರ್ಷಿಸಿದವು. ಎಲ್ಲ ರಾಜ್ಯಗಳೂ ಸಹ ತಮ್ಮ ಪ್ರಾಂತದ ವಿಶೇಷ ತಿನಿಸುಗಳನ್ನು ಜನರಿಗೆ ಉಣಬಡಿಸಿದವು.

200 ಜನಕ್ಕೆ ಮಾಡಿದ್ದ ಕೇರಳ ಪಾಯಸಂ ಒಂದೇ ಗಂಟೆಯಲ್ಲಿ ಖಾಲಿಯಾಗಿತ್ತು. ಗುಜರಾತ್ ನ ವಿಶೇಷ ಕಾಖ್ರಾ 40 ಕೆ.ಜಿ. ಒಂದೇ ದಿನಕ್ಕೆ ಖಾಲಿಯಾಗಿತ್ತು. ಹೀಗೆ ಅಡುಗೆ ಪದಾರ್ಥಗಳು ತಯಾರಾದ ಕೆಲವೇ ಗಂಟೆಗಳಲ್ಲಿ ಪೂರ್ತಿ ಖಾಲಿಯಾಗುತ್ತಿದ್ದಿದ್ದು ವಿಶೇಷ. ಸಾಂಸ್ಕೃತಿಕ, ಸಾಹಿತ್ಯಿಕ ನಗರಿ ಆಹಾರ ಪ್ರಿಯರ ನಗರಿಯಾಗಿಯೂ ಕಂಡುಬಂದಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!