11 ಶಾಲೆಗಳಲ್ಲಿ ಶೂನ್ಯ ಫಲಿತಾಂಶ, ಆದರೆ ಇವ್ಯಾವೂ ಸರ್ಕಾರಿ ಶಾಲೆ ಅಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟವಾಗಿದೆ. ಈ ಬಾರಿ ಶೇಕಡಾ 83.89ರಷ್ಟು ಫಲಿತಾಂಶ ಬಂದಿದೆ. 11 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಕಂಡುಬಂದಿದ್ದು, ಈ ಪೈಕಿ ಯಾವುದೇ ಸರ್ಕಾರಿ ಶಾಲೆಗಳಿಲ್ಲ ಎಂಬುದೇ ವಿಶೇಷ.

ಈ ಬಾರಿ A+ ಗ್ರೇಡ್‌ನಲ್ಲಿ ಶೇಕಡ.8.83 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. A ಗ್ರೇಡ್‌ನಲ್ಲಿ ಶೇಕಡ.21 ರಷ್ಟು ವಿದ್ಯಾರ್ಥಿಗಳು, B+ ಗ್ರೇಡ್‌ನಲ್ಲಿ ಶೇಕಡ.25 ರಷ್ಟು ವಿದ್ಯಾರ್ಥಿಗಳು, A ಗ್ರೇಡ್‌ನಲ್ಲಿ ಶೇಕಡ.21 ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.

ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಸರ್ಕಾರಿ ಶಾಲೆಗಳಲ್ಲಿ ಶೇಕಡ.100ರಷ್ಟು ಫಲಿತಾಂಶ ಬಂದಿದೆ. ಯಾವುದೇ ಸರ್ಕಾರಿ ಶಾಲೆಯಲ್ಲಿ ಶೂನ್ಯ ಫಲಿತಾಂಶ ಬಂದಿರುವುದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!