ಅಂತಿಮ ಕ್ಷಣದಲ್ಲಿ ಎಡವಿದ ಜಿಂಬಾಬ್ವೆ: ಬಾಂಗ್ಲಾದೇಶಗೆ ಗೆಲುವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಟಿ20 ವಿಶ್ವಕಪ್‌ನಲ್ಲಿ ಜಿಂಬಾಬ್ವೆವಿರುದ್ಧ ಬಾಂಗ್ಲಾದೇಶ ಗೆಲುವು ಸಾಧಿಸಿದೆ.

ಅಂತಿಮ ಓವರ್‌ನಲ್ಲಿ ಎರಡು ತಂಡಗಳಿಗೂ ಗೆಲ್ಲುವ ಅದ್ಭುತ ಅವಕಾಶವಿದ್ದರೂ ಜಿಂಬಾಬ್ವೆ ತಂಡ ಎಡವಿದ ಕಾರಣ ಕೇವಲ 3 ರನ್‌ಗಳಾ ಅಂತರದಿಂದ ಸೋಲು ಅನುಭವಿಸಿದೆ.

ಮೊದಲಿಗೆ ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 20 ಓವರ್‌ಗಳಲ್ಲಿ ಭರ್ತಿ 150 ರನ್‌ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಜಿಂಬಾಬ್ವೆ ಕೊನೆಯ ಕ್ಷಣದಲ್ಲಿ ಸೋಲು ಕಂಡಿತು. ಅಂತಿಮ ಓವರ್‌ನಲ್ಲಿ ಜಿಂಬಾಬ್ವೆ ಗೆಲುವಿಗೆ 16 ರನ್‌ಗಳ ಅಗತ್ಯವಿತ್ತು. ಈ ಮೂಲಕ ಎರಡು ತಂಡಗಳಿಗೂ ಗೆಲ್ಲುವ ಅದ್ಭುತ ಅವಕಾಶವಿತ್ತು. ಇಂಥಾ ಸಂದರ್ಭದಲ್ಲಿ ಜಿಂಬಾಬ್ವೆ ಗೆಲುವಿನ ಅತ್ಯಂತ ಸನಿಹಕ್ಕೆ ಬಂದಿದ್ದರೂ ಗೆಲುವು ದಕ್ಕಿಸಿಕೊಳ್ಳಲಾಗದೆ ನಿರಾಸೆ ಅನುಭವಿಸಿತು.

ಅಂತಿಮ ಎಸೆತದಲ್ಲಿ 5 ರನ್‌ಗಳ ಅಗತ್ಯವಿದ್ದಾಗ ಸ್ಟಂಪ್ ಔಟ್ ಮಾಡಿದ್ದ ಎಸೆತ ನೋಬಾಲ್ ಆಗಿದ್ದ ಕಾರಣ ಕೊನೆಯ ಎಸೆತದಲ್ಲಿ 4 ರನ್‌ಗಳಿಸುವ ಸವಾಲು ಜಿಂಬಾಬ್ವೆಗೆ ಮುಂದಿತ್ತು. ಆದರೆ ಇದನ್ನು ಗಳಿಸುವಲ್ಲಿ ವಿಫಲವಾದ ಕಾರಣ ಜಿಂಬಾಬ್ವೆ 3 ರನ್‌ಗಳ ಅಂತರದಿಂದ ಸೋಲು ಅನುಭವಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!