ಅಸಹಜ ಸ್ಥಿತಿಯಲ್ಲಿ ಕಿರುತೆರೆ ನಟಿಯ ಶವ ಪತ್ತೆ: ಕೊಲೆಯೇ? ಆತ್ಮಹತ್ಯೆಯೇ?

ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲೆಯಾಳಂ ಕಿರುತೆರೆ ನಟಿ ರೆಂಜುಶಾ ಮೆನನ್ ಅಸಹಜ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ.
35 ವರ್ಷ ಪ್ರಾಯದ ಈ ಖ್ಯಾತ ನಟಿಯ ಮೃತದೇಹ ತಿರುವನಂತಪುರದಲ್ಲಿರುವ ಅವರ ವಸತಿಸಮುಚ್ಛಯದ ಕೊಠಡಿಯಲ್ಲಿ ಪತ್ತೆಯಾಗಿದ್ದು, ದೇಹದ ಮೇಲೆ ಯಾವುದೇ ಗಾಯಗಳ ಗುರುತು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಇರಬೇಕೆಂದು ಶಂಕಿಸಲಾಗಿದೆ.
ಕಿರುತೆರೆ ಧಾರಾವಾಹಿಗಳಲ್ಲಿ ಗುರುತಿಸಿಕೊಂಡಿದ್ದ ರೆಂಜುಶಾ, ತಮ್ಮ ಪತಿ ಮನೋಜ್ ಜೊತೆ ಈ ವಸತಿ ಸಮುಚ್ಛಯದಲ್ಲಿ ವಾಸವಾಗಿದ್ದರು. ಮನೋಜ್ ಕೂಡಾ ಕಿರುತೆರೆ ನಟರಾಗಿದ್ದಾರೆ.
ನಟಿ ಆರ್ಥಿಕ ಸಂಕಷ್ಟದಿಂದ ಈ ಕೃತ್ಯವೆಸಗಿದ್ದಾರೆ ಎಂಬ ಸಂಶಯಗಳು ಆಪ್ತವಲಯದಲ್ಲಿ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ಆಯಾಮಗಳಲ್ಲಿಯೂ ತನಿಖೆ ಕೇಂದ್ರೀಕರಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!