ಹೊಸದಿಗಂತ ಡಿಜಿಟಲ್ ಡೆಸ್ಕ್:
ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಈಗಾಗಲೇ ಬೋರಿಸ್ ಜಾನ್ಸನ್ ರಾಜೀನಾಮೆ ನೀಡಿದ್ದು, ಇದೀಗ ತೆರವಾಗಿರುವಸ್ಥಾನಕ್ಕೆ ಕನ್ಸರ್ವೇಟಿವ್ ಪಕ್ಷವು ಹೊಸ ಅಭ್ಯರ್ಥಿಯನ್ನು ಸೆಪ್ಟೆಂಬರ್ 5 ರಂದು ಘೋಷಿಸಲಿದೆ.
ಇತ್ತ ಭಾರತ ಮೂಲದ ಮಾಜಿ ಹಣಕಾಸು ಸಚಿವ ರಿಷಿ ಸುನಾಕ್ ಹಾಗೂ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಸೇರಿದಂತೆ 11 ಅಭ್ಯರ್ಥಿಗಳು ಸದ್ಯ ಕಣದಲ್ಲಿದ್ದಾರೆ.
ಸೆ. 5ರಂದು ಚುನಾಯಿತ ಮತ್ತು ಹೊಸ ನಾಯಕನನ್ನು ನಾವು ಘೋಷಿಸಲೇಬೇಕು. ಹಾಗಾಗಿ ಚುನಾವಣೆ ಪ್ರಕ್ರಿಯೆ ಸೇರಿದಂತೆ ಎಲ್ಲಾ ಹಂತಗಳನ್ನು ಸಾಧ್ಯವಾದಷ್ಟು ಸುಗಮ, ತ್ವರಿತವಾಗಿ, ಸ್ವಚ್ಛವಾಗಿ ನಿರ್ವಹಿಸಬೇಕು ಎಂದು ತೀರ್ಮಾನಿಸಿದ್ದೇವೆ ಎಂದು ಸಮಿತಿಯ ಅಧ್ಯಕ್ಷ ಸರ್ ಗ್ರಹಾಂ ಬ್ರಾಡಿ ಹೇಳಿದ್ದಾರೆ.