Monday, March 27, 2023

Latest Posts

ಕಾಮೆಂಟರಿ ನೀಡುವಾಗ ಕಾಣಿಸಿಕೊಂಡ ಎದೆನೋವು; ಆಸ್ಪತ್ರೆಗೆ ದಾಖಲಾದ ರಿಕಿ ಪಾಂಟಿಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಆಸ್ಟ್ರೇಲಿಯಾದ ಬ್ಯಾಟಿಂಗ್ ದಿಗ್ಗಜ ಮತ್ತು ಐಪಿಎಲ್‌ ನಲ್ಲಿ ಡೆಲ್ಲಿ ಕ್ಯಾಪಿಟಲ್‌ ಕೋಚ್ ರಿಕಿ ಪಾಂಟಿಂಗ್ ಅವರು‌ ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿವೆ. ಪರ್ತ್‌ನಲ್ಲಿ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್‌ನ 3 ನೇ ದಿನದಾಟದಲ್ಲಿ ಚಾನೆಲ್ 7 ಗಾಗಿ ಕಾಮೆಂಟರಿ ಮಾಡುತ್ತಿದ್ದ ಪಾಂಟಿಂಗ್‌ ಊಟದ ಸಮಯದಲ್ಲಿ ಅಸ್ವಸ್ಥರಾಗಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.
ಈ ವರ್ಷ ಆಸ್ಟ್ರೇಲಿಯಾ  ಕ್ರಿಕೆಟ್‌ ಗೆ ಹೃದಯಾಘಾತ ಸಾವುಗಳಿಗೆ ಸಂಬಂಧಿಸಿದಂರೆ ಕರಾಳ ವರ್ಷ. ಕ್ರಿಕೆಟ್ ದಂತಕಥೆಗಳಾದ ರಾಡ್ ಮಾರ್ಷ್ ಮತ್ತು ಶೇನ್ ವಾರ್ನ್ ಅವರು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದನ್ನು ಸ್ಮರಿಸಬಹುದು. ಆಸ್ಟ್ರೇಲಿಯಾದ ಮತ್ತೊಬ್ಬ ಬ್ಯಾಟರ್ ಡೀನ್ ಜೋನ್ಸ್ ಕೂಡ 2020 ರ ಸೆಪ್ಟೆಂಬರ್‌ನಲ್ಲಿ ಹೃದಯಾಘಾತದಿಂದ ನಿಧನರಾದರು. ಅಲ್ಲದೆ, ವೆಸ್ಟರ್ನ್ ಆಸ್ಟ್ರೇಲಿಯಾದ ಮಾಜಿ ವಿಕೆಟ್‌ಕೀಪರ್ ಮತ್ತು ಇತ್ತೀಚೆಗೆ ನೆದರ್‌ಲ್ಯಾಂಡ್ಸ್ ಕೋಚ್, ರಯಾನ್ ಕ್ಯಾಂಪ್‌ಬೆಲ್ ಕೂಡ ಈ ವರ್ಷದ ಏಪ್ರಿಲ್‌ನಲ್ಲಿ ಹೃದಯಾಘಾತವನ್ನು ಅನುಭವಿಸಿ ನಿಧನರಾದರು.
ಪಾಂಟಿಂಗ್ ಅವರು ಅವರು 1999, 2003 ಮತ್ತು 2007 ರಲ್ಲಿ ಮೂರು ನೇರ 50-ಓವರ್‌ಗಳ ವಿಶ್ವಕಪ್‌ಗಳನ್ನು ಗೆದ್ದ ಆಸ್ಟ್ರೇಲಿಯನ್ ತಂಡದ ಭಾಗವಾಗಿದ್ದಾರೆ. ಜೊತೆಗೆ ಪ್ರಸ್ತುತ ಐಪಿಲ್‌ ನಲ್ಲಿ ಡೆಲ್ಲಿ ತಂಡದ ನಾಯಕರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!