Saturday, October 1, 2022

Latest Posts

ದಿನಭವಿಷ್ಯ | ಈ ರಾಶಿಯವರಿಗೆ ಇಂದು ವೃತ್ತಿಯಲ್ಲಿ ಅದೃಷ್ಟ ಖುಲಾಯಿಸಲಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಮೇಷ
ಪ್ರತಿಯೊಂದು ಕಾರ್ಯ ಸಮರ್ಥವಾಗಿ ಮುಗಿಸುವಿರಿ. ಖಾಸಗಿ ಬದುಕಿನಲ್ಲಿ ಸಂತೋಷಕರ ಬೆಳವಣಿಗೆ. ಬಂಧು ಗಳಿಂದ ಶುಭಸುದ್ದಿ.

ವೃಷಭ
ಖರ್ಚು ತಗ್ಗಿಸಿ  ಉಳಿತಾಯ ಹೆಚ್ಚಿಸಲು ಮನ ಮಾಡುವಿರಿ. ಆದರೆ ಅನಿರೀಕ್ಷಿತ ಬೆಳವಣಿಗೆ ನಿಮ್ಮ ಖರ್ಚು ಹೆಚ್ಚಿಸುವುದು. ಕೌಟುಂಬಿಕ ಕಿರಿಕಿರಿ.

ಮಿಥುನ
ಉತ್ಸಾಹಪೂರ್ಣ ದಿನ. ಪರಮಾಪ್ತರ ಜತೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳ ಬಯಸುವಿರಿ. ಅವರಿಂದ ಸೂಕ್ತ ಸ್ಪಂದನೆ ದೊರಕುವುದು. ವೃತ್ತಿ ಸಂಕಷ್ಟ ನಿವಾರಣೆ.

ಕಟಕ
ವೃತ್ತಿ ಮತ್ತು ಖಾಸಗಿ ಬದುಕಿನಲ್ಲಿ ನೇರ ಹಾಗೂ ದಿಟ್ಟ ನಡೆ ಅನುಸರಿಸುವಿರಿ. ಅದು ಒಳಿತನ್ನೂ ತರಲಿದೆ, ಸಂಬಂಧಕ್ಕೂ ಹಾನಿ ತರಲಿದೆ.

ಸಿಂಹ
ವೃತ್ತಿಯಲ್ಲಿ ಅದೃಷ್ಟ ಖುಲಾಯಿಸಲಿದೆ. ನಿಮ್ಮ ಆಕಾಂಕ್ಷೆ ಈಡೇರುವುದು. ಇತರರ ಬಗ್ಗೆ ವೃಥಾ ಟೀಕೆ ಮಾಡದಿರಿ. ಅವರ ಸಹಕಾರ ಪಡೆಯಿರಿ.

ಕನ್ಯಾ
ನಿಮ್ಮ ಕಠಿಣ ದುಡಿಮೆಗೆ ಫಲ ದೊರಕುವುದು. ಹಣಕಾಸು ಪರಿಸ್ಥಿತಿ ಸಾಧಾರಣ. ದೊಡ್ಡ ಖರ್ಚು ನಿಭಾಯಿಸಲು ಕಷ್ಟ ಪಡುವಿರಿ. ಅನಾರೋಗ್ಯ ಕಾಡೀತು.

ತುಲಾ
ಸಂವಹನದ ಕೊರತೆಯಿಂದ ಉದ್ವಿಗ್ನ ಸ್ಥಿತಿ ಅನುಭವಿಸುವಿರಿ. ಗೊಂದಲದ ಮನಸ್ಥಿತಿ. ಇದರಿಂದ ಹೊರಬರಲು ಏಕಾಂಗಿತನ ಬಯಸುವಿರಿ.

ವೃಶ್ಚಿಕ
ಇಂದಿನದು ಕಷ್ಟಕರ ದಿನ. ಹಲವಾರು ವಿಷಯಗಳನ್ನು  ಇತ್ಯರ್ಥ ಮಾಡ ಬೇಕಾಗುವುದು. ಆಪ್ತರ ಸಂಗದಲ್ಲಿ ಕೂಡ ಸಾಂತ್ವನ ದೊರಕದು.

ಧನು
ವೃತ್ತಿಯಲ್ಲಿ ಹೆಚ್ಚಿನ ಹೊಣೆಗಾರಿಕೆ. ಅದನ್ನು ಸಮರ್ಥವಾಗಿ ನಿಭಾಯಿಸುವಿರಿ. ಸಂಗಾತಿ ಜತೆಗೆ ಆತ್ಮೀಯ ಕಾಲಕ್ಷೇಪ. ಆರ್ಥಿಕ ಸ್ಥಿತಿ ಉತ್ತಮ.

ಮಕರ
ನಿಮ್ಮ ಸಹನೆ ಪರೀಕ್ಷಿಸುವ ಬೆಳವಣಿಗೆ ಸಂಭವಿಸುವುದು. ಕೆಲವು ವಿಚಾರ ಮನಶ್ಯಾಂತಿ ಕಲಕು ವುದು. ಆರೋಗ್ಯಕರ ಆಹಾರ ಸೇವಿಸಿ.

ಕುಂಭ
ಕೌಟುಂಬಿಕ ವಿಷಯಗಳು ಆದ್ಯತೆ ಪಡೆಯುತ್ತವೆ. ಕಾಲಮಿತಿಯಲ್ಲಿ ಕೆಲವು ವಿಚಾರ ಇತ್ಯರ್ಥ ಪಡಿಸಬೇಕು. ಬಂಧುಗಳ ಸಹಕಾರ.

ಮೀನ
ವೃತ್ತಿಯಲ್ಲಿ ಅದೃಷ್ಟ. ನಿಮ್ಮ ಪ್ರಾಮಾಣಿಕ ದುಡಿಮೆ ಮೆಚ್ಚುಗೆ ಪಡೆಯುವುದು. ಆರ್ಥಿಕ ಪರಿಸ್ಥಿತಿ ಚೇತರಿಕೆ. ಕೌಟುಂಬಿಕ ನೆಮ್ಮದಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!