ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ಸಂಗಾತಿ ಜತೆಗೆ ಸೌಹಾರ್ದದಿಂದ ವರ್ತಿಸಿರಿ. ಕೆಟ್ಟ ಮಾತು ನೆಮ್ಮದಿ ಹಾಗೂ ಸಂಬಂಧ ಕೆಡಿಸಬಹುದು. ಆರ್ಥಿಕ ಒತ್ತಡ ಹೆಚ್ಚು.
ವೃಷಭ
ಎಲ್ಲರೊಂದಿಗೆ ಸಮಾಧಾನದಿಂದ ವರ್ತಿಸಿ. ಅಸಹನೆ ಯನ್ನು ಹೊರಗೆ ಹಾಕಬೇಡಿ. ನಿಮ್ಮೊಳಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿರಿ.
ಮಿಥುನ
ಕೆಲಸದ ಒತ್ತಡ ಕಡಿಮೆ. ಹಾಗಾಗಿ ನಿರಾಳವಾಗಿ ಇಂದು ದಿನ ಕಳೆಯುವಿರಿ. ಇರುವುದರಲ್ಲೆ ತೃಪ್ತಿ ಪಡೆಯುವಿರಿ. ಅದರಿಂದಲೇ ಆನಂದ.
ಕಟಕ
ಖಾಸಗಿ ಬದುಕಿಗೆ ಹೆಚ್ಚು ಗಮನ ಕೊಡಿ. ಕೆಲವು ಹೊಣೆಗಾರಿಕೆಯಿಂದ ಜಾರಿಕೊಳ್ಳುವಂತಿಲ್ಲ. ಅದನ್ನು ನಿರ್ವಹಿಸಿ. ಆರೋಗ್ಯ ಕೆಡುವ ಆಹಾರ ಸೇವಿಸಬೇಡಿ.
ಸಿಂಹ
ವೃತ್ತಿಯಲ್ಲಿನ ಸವಾಲು ಗಳನ್ನು ಸುಲಭದಲ್ಲಿ ಎದುರಿಸುವಿರಿ. ಕಷ್ಟಗಳು ನಿಮ್ಮನ್ನು ಬಾಧಿಸವು. ಆದರೆ ಕೌಟುಂಬಿಕ ವಿಚಾರದಲ್ಲಿ ಅಸಹನೆ.
ಕನ್ಯಾ
ಕೆಲವರ ಒತ್ತಡಗಳು ನಿಮಗೆ ಅಸಹನೀಯ ಎನಿಸುತ್ತದೆ. ಕೆಲವು ಕಟ್ಟುಪಾಡುಗಳಿಂದ ಹೊರಬರಲು ಯತ್ನಿಸುವಿರಿ. ಆದರೆ ಅಸಫಲರಾಗುವಿರಿ.
ತುಲಾ
ಎಲ್ಲರೊಂದಿಗೆ ಹೊಂದಾಣಿಕೆಯಿಂದ ವರ್ತಿಸಿರಿ. ಇದರಿಂದ ಕಷ್ಟದ ಕೆಲಸವನ್ನು ಸುಲಭವಾಗಿ ಸಾಧಿಸುವಿರಿ. ಆರ್ಥಿಕ ಬಿಕ್ಕಟ್ಟು ಕಾಡಬಹುದು.
ವೃಶ್ಚಿಕ
ಆರ್ಥಿಕ ಲಾಭದ ಸಂಕೇತಗಳಿವೆ. ಅದಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಿರಿ. ಪ್ರಯತ್ನವೇ ಪಡದೆ ಕಾರ್ಯ ಸಾಧನೆಯನ್ನು ನಿರೀಕ್ಷಿಸಬೇಡಿ.
ಧನು
ನಿರೀಕ್ಷಿಸದ ಖರ್ಚು ಒದಗಿಬರುವುದು. ಆರ್ಥಿಕ ಮುಗ್ಗಟ್ಟು ಉಂಟಾದೀತು. ದೈಹಿಕ ಶ್ರಮ ಕಡಿಮೆ ಮಾಡಿ. ಬೆನ್ನು ನೋವಿನ ಸಾಧ್ಯತೆಯಿದೆ.
ಮಕರ
ಇಂದು ಎಲ್ಲವೂ ನಿಧಾನ
ಗತಿಯಲ್ಲಿ ಸಾಗುವುದು. ಹಾಗಾಗಿ ಅನವಶ್ಯ ಅವಸರ ಬೇಡ. ಮಾತು ಹಿತಮಿತವಾಗಿರಲಿ, ಇತರರಿಗೆ ನೋವು ನೀಡದಿರಿ.
ಕುಂಭ
ಯಶಸ್ವೀ ದಿನ. ಕೌಟುಂಬಿಕ ಹೊಂದಾಣಿಕೆಯು ಬಿಕ್ಕಟ್ಟು ಪರಿಹಾರಕ್ಕೆ ನೆರವಾಗುವುದು. ವೃತ್ತಿಯಲ್ಲಿ ವಿಘ್ನಗಳು ನಿವಾರಣೆ.
ಮೀನ
ಪ್ರಯತ್ನಕ್ಕೆ ಫಲ. ಆದರೆ ಪ್ರಯತ್ನಪಡದೇ ಫಲ ಸಿಗಬೇಕೆಂದು ನಿರೀಕ್ಷೆ ಬೇಡ. ಸುತ್ತಲಿನವರ ಜತೆ ಸಹನೆಯಿಂದ ವರ್ತಿಸಿರಿ. ರೋಷಾವೇಷ ಬೇಡ.