Friday, September 30, 2022

Latest Posts

ದಿನಭವಿಷ್ಯ | ಮೇಷ ರಾಶಿಯವರಿಗೆ ಕನಸು ನನಸಾಗಿಸಾಗುವ ಸುವರ್ಣಾವಕಾಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್

ಮೇಷ

ನಿಮ್ಮ ಕನಸು ನನಸಾಗಿಸುವ ಅವಕಾಶ ಬರುವುದು. ಅದನ್ನು ವ್ಯರ್ಥಗೊಳಿಸದಿರಿ. ಕೆಲವರ ಕುರಿತಾದ ನಿಮ್ಮ  ಅಪನಂಬಿಕೆ ಇಂದು ತೊಲಗುವುದು.

ವೃಷಭ
ಸಂತೋಷದ ದಿನ. ಉದ್ಯಮದಲ್ಲಿ ಯಶಸ್ಸು. ವೈವಾಹಿಕ ಸಂಬಂಧದ ಪ್ರಯತ್ನಗಳು ಯಶ ಕಾಣುತ್ತವೆ. ವಿದ್ಯಾರ್ಥಿಗಳಿಗೆ ಯಶ.

ಮಿಥುನ
ಭಾವನಾತ್ಮಕವಾಗಿ ಏರುಪೇರಿನ ದಿನ. ನಿಮ್ಮ ಅಹವಾಲು ಫಲ ಕಾಣಲಾರದು. ಸಂಬಂಧಿಸಿದವರು ಸೂಕ್ತವಾಗಿ ಸ್ಪಂದಿಸುವುದಿಲ್ಲ.

ಕಟಕ
ಅಧಿಕ ಕೆಲಸ, ಅಧಿಕ ಕಿರುಕುಳ, ಅಧಿಕ ಬೇಸರ. ಇದು ಇಂದಿನ ನಿಮ್ಮ ದಿನಚರಿ. ಯಾವುದೇ ಕೆಲಸವೂ ನಿರೀಕ್ಷಿತ ಫಲ ನೀಡುವುದಿಲ್ಲ.

ಸಿಂಹ
ಆರ್ಥಿಕ ಸಮಸ್ಯೆ ನೀಗಲಿದೆ. ಬಾಕಿಯಿರುವ ಕೆಲವು ಕೆಲಸಗಳನ್ನು ಇಂದು ಪೂರೈಸಲು ಯತ್ನಿಸಿ. ಇಲ್ಲದಿದ್ದರೆ ಅದುವೇ ಹೊರೆಯಾದೀತು.

ಕನ್ಯಾ
ಕಾರ್ಯವೊಂದನ್ನು ಮಾಡಬೇಕೆ, ಬೇಡವೆ ಎಂಬ ಸಂದಿಗ್ಧತೆ ಇಂದು ನಿಮ್ಮನ್ನು ಕಾಡಲಿದೆ. ಯಾವುದೇ ನಿರ್ಧಾರ ತಾಳಿದರೂ ವಿವಾದವು ನಿಮ್ಮನ್ನು ಬೆಂಬಿಡದು.

ತುಲಾ
ಕೆಲವರ ಕುರಿತಾದ ಪೂರ್ವಗ್ರಹ ಒಳ್ಳೆಯ ದಲ್ಲ. ಅವರತ್ತ ಅಸಹನೆ ತೋರದಿರಿ. ನಿಜ ವಿಷಯ ತಿಳಿಯಲು ಪ್ರಯತ್ನಿಸಿ. ಸೌಹಾರ್ದತೆ ಒಳ್ಳೆಯದು.

ವೃಶ್ಚಿಕ
ಮನೆಯಲ್ಲಿ ಸಂಘರ್ಷ, ವಾದ ನಡೆಯಬಹುದು. ಆದರೆ ಅದನ್ನು ಸಮಾಧಾನದಿಂದ ಪರಿಹರಿಸುವಲ್ಲಿ ಸಫಲರಾಗುವಿರಿ. ಸಹನೆ ಕಾಯ್ದುಕೊಳ್ಳಿ.

ಧನು
ಕುಟುಂಬಸ್ಥರಿಂದ ಅಥವಾ ಸ್ನೇಹಿತರಿಂದ ಕೊಡುಗೆ ಪಡೆಯುವ ಸಂಭವ. ಎಲ್ಲರೊಡನೆ ಬೆರೆಯುವುದರಿಂದ ಕುಶಿ. ಆಪ್ತರಿಂದ ಮೆಚ್ಚುಗೆ ಪಡೆಯುವಿರಿ.

ಮಕರ
ಭಾವನಾತ್ಮಕವಾಗಿ ಏಕಾಂಗಿತನ ಅನುಭವಿಸುವಿರಿ. ಯಾವುದೋ ನೋವು, ಯಾರದೋ ನಿರಾಕರಣೆ ನಿಮ್ಮನ್ನು ಕಾಡುತ್ತದೆ. ಕೌಟುಂಬಿಕ ಒತ್ತಡ.

ಕುಂಭ
ನಿಮ್ಮ ಬಾಹ್ಯ ಸ್ವರೂಪ ಚೆಂದಗಾಣಿಸಲು ಆದ್ಯತೆ ಕೊಡುವಿರಿ. ಇತರರ ಮೆಚ್ಚಿಗೆ ಪಡೆಯಲು ಯತ್ನ. ನಿಮ್ಮ ಉದ್ದೇಶ ಈಡೇರಲಿದೆ. ಎಲ್ಲರಿಂದ ಮನ್ನಣೆ.

ಮೀನ
ಹಣಕಾಸು ವಿಷಯಗಳಲ್ಲಿ ಹೆಚ್ಚು ವ್ಯಸ್ತರಾಗುವಿರಿ . ಆರ್ಥಿಕ ಬಿಕ್ಕಟ್ಟು ಕಾಡಬಹುದು. ಕೌಟುಂಬಿಕ ಬಜೆಟ್ ಹೊಂದಾಣಿಸಬೇಕು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!