Tuesday, March 28, 2023

Latest Posts

ದೈಹಿಕ ಸಾಮರ್ಥ್ಯ ವೃದ್ಧಿ, ಮಕ್ಕಳ ಓದಿಗೆ ಸಹಕಾರಿ : ಭಗವಂತ ಖೂಬಾ

ಹೊಸ ದಿಗಂತ ವರದಿ, ಬೀದರ:

ದೈಹಿಕ ಸಾಮರ್ಥ್ಯವು ಓದಿನ ಮೇಲೆ ಆಸಕ್ತಿ ಹಾಗೂ ಆಲೋಚನಾ ಶಕ್ತಿ ವೃದ್ದಿಗೆ ಸಹಕಾರಿಯಾಗಿದ್ದು. ಮಕ್ಕಳು ಓದಿನ ಜೋತೆಗೆ ದೈಹಿಕ ಸಾಮರ್ಥ್ಯದ ವೃದ್ದಿಗೂ ಒತ್ತು ನೀಡಬೇಕು ಎಂದು ಕೇಂದ್ರ ನೂತನ ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಖಾತೆ ಸಚಿವರಾದ ಭಗವಂತ ಖೂಬಾ ಹೇಳಿದರು.
ಅವರು ಶನಿವಾರ ಬೀದರ ತಾಲೂಕಿನ ಮನ್ನಳಿ ಗ್ರಾಮದ ಮೂರಾರ್ಜಿ ದೇಸಾಯಿ ವಸತಿ ಶಾಲೆ ಆಯೋಜಿಸಿದ 2023ನೇ ಸಾಲಿನ 26 ವಲಯ ಮಟ್ಟದ ಸಂಸದರ ಕೀಡಾ ಮಹಾಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ದೈಹಿಕ ವೃದ್ದಗೆ ಸಹಾಕಾರಿಯ ದೃಷ್ಟಿ ಹಾಗೂ ಕ್ರೀಡಾ ಮನೋಭಾವದಿಂದ ಸಂಸದರ ಕ್ರೀಡಾ ಮಹಾಮೇಳ ಆಯೋಜಿಸಿದ್ದು .ಸರ್ಕಾರಿ,ಸರ್ಕಾರದ ಅನುದಾನಿತ ಹಾಗೂ ಖಾಸಗಿ ಶಾಲೆಯ ಎಲ್ಲಾ ಮಕ್ಕಳು ಇದರಲ್ಲಿ ಭಾಗವಹಿಸಲು ಶಿಕ್ಷಕರು ಮಕ್ಕಳಿಗೆ ಸಹಕಾರ ನೀಡಬೇಕು.ಈ ಕ್ರೀಡಾ ಮಹಾಮೇಳವು ನರೇಂದ್ರ ಮೋದಿಯವರು ಜಾರಿಗೋಳಿಸಿದ ಖೇಲೋ ಇಂಡಿಯಾ ಕ್ರೀಡಾ ಯೋಜನೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಕ್ಕಳಲ್ಲಿ ಪರೀಕ್ಷೆಯ ಭಯ ಹೊಗಲಾಡಿಸಲು ಪರೀಕ್ಷೇ ಪೇ ಚರ್ಚಾ ಕಾರ್ಯಕ್ರಮವನ್ನು ಕಳೇದ 6 ವರ್ಷದಿಂದ ಆಯೋಜಿಸುತ್ತಿದ್ದಾರೆ.ಜೊತೆಗೆ ಭಾರತವು ಜಗತ್ತಿನ ವಿವಿಧ ದೇಶಗಳೊಂದಿಗೆ ಎಲ್ಲಾ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಹಾಗೂ ಸಾಧಿಸಬೇಕು ಎಂಬ ಉದ್ದೇಶದಿಂದ ಕಳೇದ 8 ವರ್ಷದಿಂದ ಸಹಕಾರ,ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.
ರಾಜ್ಯ ಕೈಗಾರಿಕ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಾ.ಶೈಲೇಂದ್ರ ಕೆ.ಬೆಲ್ದಾಳೆ ಮಾತನಾಡಿ ವಿದ್ಯಾರ್ಥಿಗಳು ಜೀವನದನ್ನು ಗುರಿ ಮತ್ತು ಗುರುವನ್ನು ಹೊಂದಿರಬೇಕು ಅಂದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಿಗಲು ಸಾಧ್ಯವಾಗುತ್ತದೆ.ವಿದ್ಯಾರ್ಥಿಗಳು ಇಂತಹ ಕ್ರೀಡಾ ಮಹಾಮೇಳಗಳಲ್ಲಿ ಭಾಗಹಿಸುವ ಮೂಲಕ ರಾಷ್ಟçಮಟ್ಟದಲ್ಲಿ ಬೆಳಿಯಬೇಕು ಇದಕ್ಕೆ ನಾವು ಸಹಕಾರ ನೀಡುತ್ತೆವೆ ಹಾಗೂ ಶಿಕ್ಷಕರು ಸಹ ಸಹಕಾರ ನೀಡಬೇಕು ಎಂದರು ಹೇಳಿದರು.
ಈ ಸಂದರ್ಭದಲ್ಲಿ ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಾಬುವಾಲಿ,ಬೀದರ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಕ ಅಧಿಕಾರ ಶಿಲ್ಪಾ ಎಂ., ಮನ್ನಳಿ ಗ್ರಾಮ ಪಂಚಾಯತ ಅಧ್ಯಕ್ಷ ಅಲ್ಲಾವುದ್ದಿನ ನಿರ್ಣಾ, ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೀದರ ಉಪನಿರ್ದೇಶಕ ಸಲೀಂ ಪಾಶಾ,ಸಮಾಜ ಕಲ್ಯಾಣ ಅಧಿಕಾರಿ ಗಿರೀಶ ರಂಜೋಳಕರ,ತಾಲೂಕ ಪಂಚಾಯತ ಕಾರ್ಯನಿರ್ವಹಕ ಅಧಿಕಾರಿ ಮಾಣಿಕರಾವ ಪಾಟೀಲ್,ಬೀದರ ಡಿ.ಸಿ.ಓ ಶರಣಪ್ಪ ಬಿರಾದಾರ,ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಕುಮಾರ ಬೆಳಮಗಿ,ಬೀದರ ಅಕ್ಷರ ದಾಸೋಹದ ಸಹಾಯಕ ನರ್ದೇಶಕರಾದ ಗೀತಾ ಎಸ್. ವಡ್ಡೆ,ಮನ್ನಳಿ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರ ರಾಮಣ್ಣ, ಮನ್ನಳಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಚಾರ್ಯ ತುಕರಾಮ ಯಾತಪ್ಪ,ಬೀದರ ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ಎ.ಕೆ ಜೋಶಿ ಸೇರಿದಂತೆ ವಿವಿಧ ಶಾಲೆ ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಹಾಕಿ ಕ್ರೀಡಾಪಟು ಮೂರ್ಶೋದ್ದಿನ ಅವರಿಗೆ ಸಂಸದರು ಸನ್ಮಾನಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!