Saturday, December 9, 2023

Latest Posts

ನೇತಾಜಿ ʼಆಜಾದ್ ಹಿಂದ್ ಫೌಜ್ʼ ಸೈನ್ಯದ ಗೂಢಾಚಾರ ಕೇಸರಿ ಚಂದ್ ನ ಬಗ್ಗೆ ಕೇಳಿದ್ದೀರಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್ (ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ವಿಶೇಷ)
ಕೇಸರಿ ಚಂದ್ ಅವರು 1920 ರಲ್ಲಿ ಡೆಹ್ರಾಡೂನ್ ಜಿಲ್ಲೆಯ ವವಟಖತ್ ಸಾಲಿ ಗ್ರಾಮದಲ್ಲಿ ಜನಿಸಿದರು. ಡೆಹ್ರಾಡೂನ್‌ನಲ್ಲಿ ಡಿಎವಿ ಕಾಲೇಜಿನಲ್ಲಿ ಶಿಕ್ಷಣ ಪಡೆದು ಉತ್ತೀರ್ಣರಾದ ಬಳಿಕ ಅವರು ಆರ್ಮಿ ಸರ್ವಿಸ್ ಕಾರ್ಪ್ಸ್‌ಗೆ ಸೇರಿದರು. 1940 ರಲ್ಲಿ ಅವರು ಸೈನ್ಯದಲ್ಲಿ ಭಡ್ತಿ ಪಡೆದರು.
ಮನದೊಳಗೆ ಮಿಡಿಯುತ್ತಿದ್ದ ದೇಶಪ್ರೇಮ ಮತ್ತು ಕ್ವಿಟ್ ಇಂಡಿಯಾ ಚಳುವಳಿ ಹಾಗೂ ಸುಭಾಷ್ ಚಂದ್ರ ಬೋಸ್ ಅವರ ದೆಹಲಿ ಚಲೋ ಅಭಿಯಾನದಿಂದ ಪ್ರೇರಿತರಾದ ಕೇಸರಿ ಚಾಂದ್ 1942 ರಲ್ಲಿ‌ ತಮ್ಮ ಸೇನಾ ಉದ್ಯೋಗವನ್ನು ತೊರೆದು ಆಜಾದ್ ಹಿಂದ್ ಫೌಜ್ ಸೈನ್ಯ ಸೇರಿದರು. ಫೆಬ್ರವರಿ 1942 ರಲ್ಲಿ ಅವರನ್ನು ಮಲಯಾದಲ್ಲಿ ಯುದ್ಧ ಕೈದಿಯಾಗಿ ಸೆರೆಹಿಡಿಯಲಾಯಿತು. ಅಲ್ಲಿಂದ ಬಿಡುಗಡೆಯಾದ ಬಳಿಕ ನೇತಾಜಿ ಅವರು ಕೇಸರಿ ಚಾದ್‌ ಗೆ ಕ್ಯಾಪ್ಟನ್ ಹುದ್ದೆಯನ್ನು ನೀಡಿ ಆಜಾದ್ ಹಿಂದ್ ಫೌಜ್‌ ಸಂಘದ ಗೂಢಚಾರನಾಗಿ ನೇಮಿಸಿದರು.
ಆಜಾದ್ ಹಿಂದ್ ಫೌಜ್‌ನ ಗುಪ್ತಚರ ಕಾರ್ಯವನ್ನು ಮಾಡುತ್ತಿದ್ದಾಗ, ಮಣಿಪುರ ಪ್ರದೇಶದಲ್ಲಿ ಬ್ರಿಟಿಷ್ ಸೈನಿಕರು ಅವರನ್ನು ಬಂಧಿಸಿ ಸರೆಹಿಡಿದರು. ಮತ್ತು ದೆಹಲಿಯ ಕೆಂಪು ಕೋಟೆಯಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಿದರು. ಬ್ರಿಟೀಷರ ವಿರುದ್ಧ ಯುದ್ಧದಲ್ಲಿ ತೊಡಗಿದ್ದಕ್ಕಾಗಿ ಕ್ಷಮೆ ಕೇಳುವಂತೆ ಹಲವು ಬಾರಿ ಒತ್ತಡ ಹೇರಲಾಗಿತ್ತು. ಕ್ಷಮೆ ಕೇಳಿದರೆ ಜೈಲಿನಿಂದ ಬಿಡುಗಡೆ ಸಹ ಮಾಡುವುದಾಗಿ ಬ್ರಿಟೀಷರು ಹೇಳಿದರು. ಆದರೆ ಧೀರ ಸೈನಿಕ ಕೇಸರಿ ಚಾಂದ್‌ ತಾನು ಕ್ಷಮೆಯಾಚಿಸುವುದಕ್ಕಿಂತ ಪ್ರಾಣ ತ್ಯಜಿಸುವ ಎರಡನೇ ಆಯ್ಕೆಯನ್ನೇ ಆರಿಸಿಕೊಳ್ಳುತ್ತೇನೆ ಎಂದು ಬ್ರಿಟೀಷರಿಗೆ ಉತ್ತರಿಸಿದ್ದರು. ಕ್ಷಮೆ ಕೇಳಲು ನಿರಾಕರಿಸಿದ ಅವರನ್ನು 1945 ರ ಮೇ 20 ರಂದು   ಗಲ್ಲಿಗೇರಿಸಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!