ಹೊಸದಿಗಂತ ವರದಿ, ಕಲಬುರಗಿ:
ಭಾರತದಲ್ಲಿ ಪ್ರತಿವರ್ಷವು ಕೋಟಿಗಟ್ಟಲೆ ರಾಖಿಗಳನ್ನು ಹಬ್ಬದ ನಂತರ ತಾಜ್ಯದಲ್ಲಿ ಎಸೆಯಲಾಗುತ್ತದೆ. ಆಹಾರವನ್ನು ಹುಡುಕುತ್ತಾ ಬರುವ ಪ್ರಾಣಿ, ಪಕ್ಷಿಗಳು ಆಹಾರ ಜೊತೆಗೆ ಪ್ಲಾಸ್ಟಿಕ ರಾಖಿಗಳು ಕೂಡ ತಿನ್ನುತ್ತವೆ ಪ್ಲಾಸ್ಟಿಕ ಕರಗದೆ ಬಹಳಷ್ಟು ಪ್ರಾಣಿ – ಪಕ್ಷಿಗಳು ನೋವವನ್ನು ಅನುಭವಿಸಿ ಜೀವ ಕಳೆದುಕೊಳ್ಳುತ್ತವೆ. ಜೊತೆಗೆ ಪರಿಸರ ಕೂಡ ನಾಶಗೊಳ್ಳುತ್ತಲಿದೆ. ಅದನ್ನು ಪರಿಗಣಿಸಿ ಜಿಲ್ಲೆಯ ಕಲಬುರಗಿ ತಾಲ್ಲೂಕಿನ ಗರೂರ ( ಬಿ ) ಗ್ರಾಮದಲ್ಲಿ ಮಂದಾಹಾಸ ಶಿಕ್ಷಣ ಮತ್ತು ಸೇವಾ ಸಂಸ್ಥೆಯ ಶಿವಕುಮಾರ್ ಹಳ್ಳಿ ಎಂಬವರು ಪರಿಸರ ಸ್ನೇಹಿ ಗೋಮಯ ರಾಖಿಗಳನ್ನು ತಯಾರಿಸುತ್ತಿದ್ದಾರೆ.
ಈ ಪರಿಸರ ಸ್ನೇಹಿ ರಾಖಿಯು ಗೋವುಗಳ ಸೆಗಣಿಯಿಂದ ತಯಾರಿಸಿದು ಮತ್ತು ರಾಖಿಯ ಮೇಲ್ಬಾಗದಲ್ಲಿ ತುಳಸಿ ಅಥವಾ ಈರುಳ್ಳಿ ಬೀಜಗಳನ್ನು ಹಚ್ಚಲಾಗಿದೆ. ಈ ರಾಖಿಗೆ ರಕ್ಷಾಬಂಧನ ಮುಗಿದ ಮರುದಿನ ರಾಖಿಯು ಎಲ್ಲಿಯು ಎಸೆದರು ರಾಖಿವು ಕ್ರಮೆಣವಾಗಿ ಕರಗಿ ಗೊಬ್ಬರವಾಗಿ ತುಳಸಿ ಅಥವ ಈರುಳ್ಳಿ ಸಸ್ಯ ಬೆಳೆಯುತ್ತದೆ ಹೊರೆತು ಪರಿಸರಕ್ಕೆ ಯಾವುದೇ ರೀತಿ ಪರಿಸರ ಹಾನಿಯಾಗುದಿಲ್ಲ ಎನ್ನುತ್ತಾರೆ ಶಿವಕುಮಾರ.
ರಾಖಿ ಜೊತೆಗೆ ಮಂದಹಾಸ ವೃಕ್ಷ ಕಿಟ್‌ನ್ನು ಸಹ ತಯಾರಿಸಲಾಗುತ್ತಿದೆ. ಈ ಕಿಟ್ ನಲ್ಲಿ ಗೋವಿನ ಸೆಗಣಿಯಿಂದ ತಯಾರಿಸಿರುವ ಬುಟ್ಟಿ, ಗೋಮಯ ರಾಖಿ, ಮಣ್ಣು, ಎರೆಹುಳ ಗೊಬ್ಬರ, ಕೋಕೋಪಿಟ್, ಸಸ್ಯದ ಬೀಜಗಳು, ಸಸ್ಯದ ಬೋರ್ಡ, ಅಕ್ಕಿ ಹಾಗೂ ಕುಂಕುಮ ಇಡಲಾಗಿದೆ. ಎಲ್ಲವೂ ಪರಿಸರ ಸ್ನೇಹಿಯಾಗಿವೆ. ಶಿವಕುಮಾರ್ ಅವರ ಪರಿಸರ ಸ್ನೇಹಿ ರಾಖಿ ತಯಾರಿಸಲು ಮೈನಾಬಾಯಿ, ದಯಾನಂದ ಹಾಗೂ ಅಂಬಿಕಾ ಎನ್ನುವರು ಸಾಥ್ ನೀಡಿದ್ದಾರೆ. ಗೋಮಯ ರಾಖಿಗಾಗಿ ಮೊ. ಸಂಖ್ಯೆ : 8095007278, 7259128278 ಸಂಪರ್ಕಿಸಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪ್ರಾ