ಹೊಸದಿಗಂತ ವರದಿ,ಅಂಕೋಲಾ:
ಲಾರಿ ಚಾಲಕನೊಬ್ಬ ಲಾರಿ ಚಲಾಯಿಸುತ್ತಿದ್ದ ಸಂದರ್ಭದಲ್ಲಿ ಅಸ್ವಸ್ಥಗೊಂಡು ಮೃತ ಪಟ್ಟ ಘಟನೆ ತಾಲೂಕಿನ ಆಂದ್ಲೆ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದೆ.
ಕೇರಳ ತಿರುವನಂತಪುರಮ್ ಜವಾಹರ್ ಪಾರ್ಕ್ ಕಡಾಯಿಲ್ ವೀಡು ನಿವಾಸಿ ಅನೀಸಕುಮಾರ್ ಅರ್ಮುಗಂ (30) ಮೃತ ವ್ಯಕ್ತಿಯಾಗಿದ್ದು ಈತ ಸಹ ಚಾಲಕನೊಂದಿಗೆ ಕೆ.ಎಲ್ 01 ಸಿ.ವೈ 0502 ಲಾರಿಯಲ್ಲಿ ಸರಕು ತುಂಬಿ ಗುಜರಾತಿಗೆ ಹೊರಟಿದ್ದು ಜೂನ್ 1 ರ ರಾತ್ರಿ 11 ಘಂಟೆಗೆ ಹೊನ್ನಾವರದಲ್ಲಿ ಊಟ ಮುಗಿಸಿ ಲಾರಿ ಚಲಾಯಿಸಿ ಬಂದಿದ್ದು ಜೂನ್ 2 ರ ಮಧ್ಯರಾತ್ರಿ 1 ಘಂಟೆಗೆ ಚಾಲಕ ಸ್ಥಾನದಿಂದ ಅಸ್ವಸ್ಥಗೊಂಡು ಒರಗಿ ಬಿದ್ದ ಕಾರಣ ಸಹ ಚಾಲಕ ಬೇರೆ ಲಾರಿ ಚಾಲಕರ ಸಹಾಯದಿಂದ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು 2 ಘಂಟೆ ಸುಮಾರಿಗೆ ಅನೀಸಕುಮಾರ್ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ಚಾಲಕನ ಸಾವಿನ ಕುರಿತಂತೆ ಸಹ ಚಾಲಕ ಕೇರಳದ ಸುನೀಲಕುಮಾರ ಎನ್ನುವವರು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪಿ.ಎಸ್. ಐ ಕುಮಾರ ಕಾಂಬಳೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.