Saturday, April 1, 2023

Latest Posts

ಸಹೋದ್ಯೋಗಿಗಳ ಮೇಲೆ ಬಿಎಸ್‌ಎಫ್‌ ಯೋಧನಿಂದ ಗುಂಡಿನ ದಾಳಿ: ಐವರು ಯೋಧರ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಬಿಎಸ್ಎಫ್ ಸಿಬ್ಬಂದಿಯೊಬ್ಬರು ತನ್ನ ಸಹೋದ್ಯೋಗಿಗಳ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ ಅಘಾತಕಾರಿ ಘಟನೆ ಪಂಜಾಬಿನ ಅಮೃತಸರದಲ್ಲಿ ಭಾನುವಾರ ನಡೆದಿದೆ. ಘಟನೆಯಲ್ಲಿ ಐವರು ಯೋಧರು ಮೃತಪಟ್ಟಿದ್ದಾರೆ.
‘ಅಮೃತಸರ- ಅಟ್ಟಾರಿ ರಸ್ತೆಯಲ್ಲಿರುವ ಖಾಸಾ ಸೇನಾ ಹೆಡ್​ಕ್ವಾರ್ಟರ್ಸ್​ನಲ್ಲಿ ಬೆಳಗ್ಗೆ ಘಟನೆ ನಡೆದಿದೆ. 144ನೇ ಬೆಟಾಲಿಯನ್​ನ ಸತ್ತೆಪ್ಪ ಎಸ್.ಕೆ. ಎಂಬ ಯೋಧ ತನ್ನ ಕರ್ತವ್ಯದ ಗನ್‌ ನಿಂದ ಸಹೋದ್ಯೋಗಿಗಳು ಹಾಗೂ ಒಆರ್​ಎಸ್​ ಬ್ಯಾರಕ್​ನಲ್ಲಿದ್ದವರ ಮೇಲೆ ಏಕಾಏಕಿ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಐವರು ಯೋಧರು ಮೃತಪಟ್ಟು, ಒರ್ವ ಯೋಧ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಗಾಯಾಳುವನ್ನು ಅಮೃತಸರ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಗುಂಡು ಹಾರಿಸಿದ ಯೋಧ ಕೂಡ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಸಧ್ಯ ಗಡಿ ಭದ್ರತಾ ಪಡೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!