ಹೊಸದಿಗಂತ ಡಿಜಿಟಲ್ ಡೆಸ್ಕ್
ಬಿಗ್ ಬಾಸ್ ಕನ್ನಡ ಒಟಿಟಿ ಶೋ ಅಂತಿಮವಾಗಿ ಮುಕ್ತಾವಾಗಿದೆ. ಇನ್ನು ರೂಪೇಶ್ ಶೆಟ್ಟಿ ಟಾಫರ್ ಆಗಿಹೊರಹೊಮ್ಮಿದ್ದಾರೆ
ಫಿನಾಲೆಯಲ್ಲಿ ಇಂದು 8 ಸ್ಪರ್ಧಿಗಳಲ್ಲಿ ಆರ್ಯವರ್ಧನ್ ಗುರೂಜಿ ,ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ ಹಾಗು ಸನ್ಯಾ ಅಯ್ಯರ್ ಅವರು ಗೆಲುವು ಸಾದಿಸುವ ಮೂಲಕ ಟಿವಿ ಸೀಸನ್ಗೆ ಎಂಟ್ರಿ ಪಡೆದಿದ್ದಾರೆ .
ಇನ್ನು ಉಳಿದ ಸ್ಪರ್ಧಿಗಳಾದ ಜಯಶ್ರೀ, ಜಶ್ವ೦ತ್ ,ಸೋಮಣ್ಣ ಮಾಚಿಮಡ ಹಾಗು ಸೋನು ಗೌಡ ಅವರು ಶೋ ಯಿಂದ ಔಟ್ ಆಗಿದ್ದಾರೆ.
ಸೆಪ್ಟೆಂಬರ್ 24ರ ಸಂಜೆ 6 ಗಂಟೆಗೆ ‘ಬಿಗ್ ಬಾಸ್ ಕನ್ನಡ ಸೀಸನ್ 9’ರ ಗ್ರ್ಯಾಂಡ್ ಪ್ರೀಮಿಯರ್ ಆಗಲಿದೆ. ನಂತರ ಪ್ರತಿ ದಿನ 9 ಗಂಟೆಗೆ ಸಂಚಿಕೆಗಳು ಪ್ರಸಾರ ಆಗಲಿವೆ. ‘ಬಿಗ್ ಬಾಸ್ ಕನ್ನಡ ಒಟಿಟಿ’ ಶೋನಲ್ಲಿ ಆಯ್ಕೆ ಆದ ಸ್ಪರ್ಧಿಗಳ ಜೊತೆಗೆ ಹಳೇ ಸೀಸನ್ನ ವ್ಯಕ್ತಿಗಳು ಕೂಡ ಇರಲಿದ್ದಾರೆ. ಅಲ್ಲದೇ, 9 ಮಂದಿ ಹೊಸ ಸ್ಪರ್ಧಿಗಳು ಎಂಟ್ರಿ ನೀಡಲಿದ್ದಾರೆ