Friday, February 23, 2024

ಬೇರೆ ಯುವಕನೊಂದಿಗೆ ಮದುವೆ: ನೊಂದ ಭಗ್ನಪ್ರೇಮಿಯಿಂದ ಪ್ರೇಯಸಿಯ ಕೊಲೆ

ಹೊಸದಿಗಂತ ವರದಿ, ಮಡಿಕೇರಿ:

ಪ್ರೀತಿ ನಿರಾಕರಿಸಿ ಬೇರೊಬ್ಬನ ಜತೆ ವಿವಾಹವಾದ ನವವಿವಾಹಿತೆಯನ್ನು ಭಗ್ನ ಪ್ರೇಮಿ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಬೆಂಗಳೂರಿನ ದೇವನಹಳ್ಳಿ ತಾಲೂಕಿನ ಆವತಿ ಗ್ರಾಮದಲ್ಲಿ ನಡೆದಿದೆ.

ಸೌಮ್ಯ (23) ಕೊಲೆಯಾದ ನವವಿವಾಹಿತೆ. ನಿನ್ನೆ ರಾತ್ರಿ ಪಾಗಲ್ ಪ್ರೇಮಿ ಸುಬ್ರಹ್ಮಣ್ಯ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಬಳಿಕ ಮನೆಯಲ್ಲಿದ್ದ ಸೌಮ್ಯ ಪೋಷಕರು ಕಿರುಚಾಡಿದ್ದಾರೆ. ಕೂಡಲೇ ಸ್ಥಳೀಯರು ಬಂದು ನೋಡಿದಾಗ ಸೌಮ್ಯ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಕೂಡಲೇ ಆಕೆಯನ್ನು ಅದೇ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೌಮ್ಯ ಸಾವನ್ನಪಿದ್ದಾಳೆ.

ಇನ್ನೂ ಕೊಲೆ ಮಾಡಿ ಪರಾರಿಯಾಗಿದ್ದ ಸುಬ್ರಹ್ಮಣ್ಯ ನನ್ನು ಪೊಲೀಸರು ಹುಡುಕಲು ಯತ್ನಿಸಿದ್ದು, ಈತನು ಕೂಡ ಸೌಮ್ಯಳನ್ನು ಕೊಲೆ ಮಾಡಿದ ಬಳಿಕ ಅಲ್ಲಿಂದ ಪರಾರಿಯಾಗಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈತನು ಕೂಡ ಪ್ರಸ್ತುತ ಆಕಾಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನೂ ವಿಜಯಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸೌಮ್ಯ ಬೆಂಗಳೂರಿನ ಮತ್ತೊಬ್ಬ ಯುವಕನ ಜೊತೆ ಮದುವೆಯಾಗಿ 15 ಮಾತ್ರ ಆಗಿತ್ತು. ನಿನ್ನೆಯಷ್ಟೆ ಸೌಮ್ಯ ಆವತಿ ಗ್ರಾಮಕ್ಕೆ ಬಂದಿದ್ದಳು, ಸೌಮ್ಯ ಪತಿಯೇ ಬಂದು ಬಿಟ್ಟುಹೋಗಿದ್ದ. ಆದ್ರೆ ಈ ವಿಷಯವನ್ನು ತಿಳಿದುಕೊಂಡ ಸುಬ್ರಹ್ಮಣಿ ನಿನ್ನೆ ರಾತ್ರಿ ಮನೆಯಲ್ಲಿ ಸೌಮ್ಯ ಇದ್ದಿದ್ದನ್ನು ನೋಡಿ ಆಕೆಯ ಮೇಲೆ ಏಕಾಏಕಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದನು.

ಸೌಮ್ಯ ಹಾಗೂ ಸುಬ್ರಮಣಿ ಇಬ್ಬರು ಕೂಡ ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನ ನಾಗವಾರದ ಕಾಫಿ ಡೇ ಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!