1.45 ಲಕ್ಷ ಕೋಟಿ ದಾಟಿದೆ 5ಜಿ ತರಗಾಂತರ ಹರಾಜು ಮೊತ್ತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಬಹುನಿರೀಕ್ಷಿತ 5G ತರಂಗಾಂತರದ ಬಿಡ್‌ ಮೊತ್ತವು 1.45 ಲಕ್ಷ ಕೋಟಿ ರೂಪಾಯಿಗಳನ್ನು ಮೀರಿದೆ ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಮಂಗಳವಾರದಂದು(ನಿನ್ನೆ) ನಾಲ್ಕು ಸುತ್ತುಗಳ ಹರಾಜು ಮುಗಿದಿದ್ದು ಇಂದು ಐದನೇ ಸುತ್ತಿನ ಹರಾಜು ನಡೆಯಲಿದೆ. 700 MHz ಬ್ಯಾಂಡ್ ತರಂಗಾಂತರಗಳಿಗೆ ಬಿಡ್‌ಗಳನ್ನು ಸ್ವೀಕರಿಸಲಾಗಿದೆ.

ದೇಶದ ನಾಲ್ಕು ಪ್ರಮುಖ ಸಂಸ್ಥೆಗಳಾದ ಅದಾನಿ ಎಂಟರ್‌ಪ್ರೈಸಸ್, ಭಾರ್ತಿ ಏರ್‌ಟೆಲ್, ರಿಲಯನ್ಸ್ ಜಿಯೋ ಮತ್ತು ವಿ (ಹಿಂದೆ ವೊಡಾಫೋನ್ ಐಡಿಯಾ) ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವು.

ಆಗಸ್ಟ್ 1 ರೊಳಗೆ ತರಂಗಾಂತರ ಹಂಚಿಕೆಯನ್ನು ಪೂರ್ಣಗೊಳಿಸಲು ಕೇಂದ್ರವು ಆಶಿಸಿದೆ. ಈ ವರ್ಷದ ಅಂತ್ಯದ ವೇಳೆಗೆ ಹಲವಾರು ನಗರಗಳಲ್ಲಿ 5G ಸೇವೆಗಳನ್ನು ನಿರೀಕ್ಷಿಸಬಹುದು ಎಂದು ಸಚಿವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!