October 23, 2026
Friday, October 23, 2026
spot_img

‘ಜಬ್ ವಿ ಮೆಟ್’ ಜೋಡಿ ರೀ-ಯೂನಿಯನ್: ಕರೀನಾ-ಶಾಹಿದ್ ಭೇಟಿಯಿಂದ ಭಾವುಕರಾದ ಫ್ಯಾನ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಕ್ರೇಜಿಯೆಸ್ಟ್ ಕಪಲ್ ಎಂದೇ ಹೆಸರುವಾಸಿಯಾಗಿದ್ದ ಕರೀನಾ ಕಪೂರ್ ಮತ್ತು ಶಾಹಿದ್ ಕಪೂರ್ ವರ್ಷಗಳ ನಂತರ ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಿದ್ದಾರೆ. ಕಾರ್ಯಕ್ರಮದ ವೇದಿಕೆಗೆ ಆಗಮಿಸಿದ ಕರೀನಾ ಕಪೂರ್, ಮುಖದಲ್ಲಿ ಮಂದಹಾಸ ಬೀರುತ್ತಾ ಶಾಹಿದ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಅಷ್ಟೇ ಅಲ್ಲದೆ, ಪರಸ್ಪರ ಹಗ್ ಮಾಡಿಕೊಂಡು ಕುಶಲೋಪರಿ ವಿಚಾರಿಸಿದ್ದಾರೆ.

ಮುಂಬೈನಲ್ಲಿ ನಡೆದ ಪ್ರತಿಷ್ಠಿತ IIFA 2027 ಪ್ರಶಸ್ತಿ ಪ್ರದಾನ ಸಮಾರಂಭದ ಘೋಷಣಾ ಕಾರ್ಯಕ್ರಮದಲ್ಲಿ ಅಪರೂಪದ ದೃಶ್ಯವೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಡಿಯೋವೊಂದರಲ್ಲಿ ಕರೀನಾ ನಗುತ್ತಾ ಶಾಹಿದ್ ಅವರನ್ನು ಸ್ವಾಗತಿಸುವುದು ಮತ್ತು ಶಾಹಿದ್ ಅವರ ಆರೋಗ್ಯ ವಿಚಾರಿಸುವುದು ಸ್ಪಷ್ಟವಾಗಿ ಸೆರೆಯಾಗಿದೆ.

https://www.instagram.com/reel/Dey-6Bro-Ci/?utm_source=ig_web_button_share_sheet

ಕರೀನಾ ಕಪ್ಪು ಬಣ್ಣದ ಲೆದರ್ ಸ್ಕರ್ಟ್ ಸೂಟ್‌ನಲ್ಲಿ ಮಿಂಚಿದರೆ, ಶಾಹಿದ್ ಬಿಳಿ ಬಣ್ಣದ ಸೂಟ್‌ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡರು. ಈ ಜೋಡಿಯನ್ನು ಒಟ್ಟಾಗಿ ನೋಡಿ ದಶಕಗಳ ಹಿಂದಿನ ‘ಜಬ್ ವಿ ಮೆಟ್’ ಚಿತ್ರದ ನೆನಪುಗಳನ್ನು ಮೆಲುಕು ಹಾಕಿದ ಅಭಿಮಾನಿಗಳು, ಸಾಮಾಜಿಕ ಜಾಲತಾಣಗಳಲ್ಲಿ “ಇವರನ್ನು ನೋಡಿ ನಮಗೇಕೆ ಇಷ್ಟೊಂದು ಎಮೋಷನಲ್ ಆಗುತ್ತಿದೆ?” ಎಂದು ಬರೆದುಕೊಂಡು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

ಇದೇ ವೇಳೆ ನಟ ಸಲ್ಮಾನ್ ಖಾನ್ ಅವರು ಕೂಡ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಸಲ್ಮಾನ್ ಖಾನ್ ಡಾರ್ಕ್ ಬ್ಲೇಜರ್ ಮತ್ತು ಜೀನ್ಸ್ ಧರಿಸಿ ಭಾರೀ ಭದ್ರತೆಯೊಂದಿಗೆ ಆಗಮಿಸಿದ್ದರು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ನಟ ಟೈಗರ್ ಶ್ರಾಫ್ ಮೇಲೆ ನಡೆದ ದಾಳಿಯ ಹಿನ್ನೆಲೆಯಲ್ಲಿ, ಸಲ್ಮಾನ್ ಖಾನ್ ಅವರ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಏಕೆಂದರೆ ದಾಳಿಕೋರರ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಸಲ್ಮಾನ್ ಖಾನ್ ಅವರ ಹೆಸರೂ ಕೂಡ ಉಲ್ಲೇಖಿಸಲ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸಲ್ಮಾನ್ ಖಾನ್ ಸುತ್ತಲೂ ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

Must Read