Saturday, February 4, 2023

Latest Posts

ಕ್ರಿಕೆಟ್ ನೋಡಲು ಬಂದ 1 ಲಕ್ಷ ಅಭಿಮಾನಿಗಳು: ಗಿನ್ನೆಸ್​ ದಾಖಲೆ ಬರೆದ ನರೇಂದ್ರ ಮೋದಿ ಕ್ರೀಡಾಂಗಣ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಗುಜರಾತ್​ನ ಅಹಮದಾಬಾದ್​​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣ ಅಭಿಮಾನಿಗಳ ಹಾಜರಾತಿಯಿಂದ ವಿಶ್ವದಾಖಲೆ ಪುಟ ಸೇರಿದೆ.2022ರ ಇಂಡಿಯನ್​ ಪ್ರೀಮಿಯರ್​ ಲೀಗ್​ನ(ಐಪಿಎಲ್​) ಫೈನಲ್​ ಪಂದ್ಯದಲ್ಲಿ ಅತಿಹೆಚ್ಚು ಅಭಿಮಾನಿಗಳು ಕ್ರೀಡಾಂಗಣಕ್ಕೆ ಹಾಜರಾಗಿದ್ದು, ಈ ಮೂಲಕ ಗಿನ್ನೆಸ್​ ದಾಖಲೆಯಾಗಿದೆ.

ಮೇ 29 ರಂದು ನಡೆದ ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ಪಂದ್ಯ ನೋಡಲು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂಗೆ 101,566 ಮಂದಿ ಹಾಜರಾಗಿದ್ದರು. ಇದು ಟಿ20 ಕ್ರಿಕೆಟ್‌ನ ಇತಿಹಾಸದಲ್ಲೇ ಅತಿ ದೊಡ್ಡ ಅಭಿಮಾನಿಗಳ ಸಂಖ್ಯೆಯಾಗಿದೆ.

ಈ ಕುರಿತು ಮಾಹಿತಿ ನೀಡಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಕಾರ್ಯದರ್ಶಿ ಜಯ್​ ಶಾ ಅವರು ಪುರಸ್ಕಾರದ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದಾರೆ.

 

ಭಾರತ ಗಿನ್ನೆಸ್ ವಿಶ್ವದಾಖಲೆಯನ್ನು ಬರೆದಿರುವುದು ಪ್ರತಿಯೊಬ್ಬರಿಗೂ ಹೆಮ್ಮೆಯ ಕ್ಷಣವಾಗಿದೆ. ಇದು ದೇಶದ ಎಲ್ಲಾ ಅಭಿಮಾನಿಗಳ ಬೆಂಬಲ ಉತ್ಸಾಹದಿಂದ ಸಾಧ್ಯವಾಗಿದೆ. ಅಭಿನಂದನೆಗಳು ಎಂದು ಬರೆದುಕೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!