ಎಲೆಕ್ಷನ್‌ಗಾಗಿ ರಾಜ್ಯಾದ್ಯಂತ 10 ಸಾವಿರ ಸರ್ಕಾರಿ ಬಸ್ ಬುಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಎಲ್ಲ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಚುನಾವಣಾ ಕಾರ್ಯಕ್ಕೆ ಬೇಕಾದ ಬಸ್‌ಗಳ ವ್ಯವಸ್ಥೆಗೆ ಬುಕಿಂಗ್ ನಡೆಯುತ್ತಿದ್ದು, ಸಿಲಿಕಾನ್ ಸಿಟಿಯಲ್ಲಿ ಬಸ್ ಕೊರತೆಯಾಗುವ ಸಾಧ್ಯತೆ ಇದೆ.

ಚುನಾವಣಾ ಅಧಿಕಾರಿಗಳು ಎಲೆಕ್ಷನ್‌ಗೆ ಬೇಕಾದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಚುನಾವಣೆ ಸಿದ್ಧತೆಗೆ ಬೇಕಾದ ಸಾರಿಗೆ ವ್ಯವಸ್ಥೆಗೆ ರಾಜ್ಯಾದ್ಯಂತ ಅಂದಾಜು 10 ಸಾವಿರ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಹಾಗೂ ಆರ್‌ಟಿಒ ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಮೇ.5 ರಿಂದ ಮೇ.15 ರವರೆಗೆ ಚುನಾವಣಾ ಕೆಲಸಕ್ಕೆ ಬಸ್‌ಗಳ ಅವಶ್ಯಕತೆ ಇದ್ದು, ಈ ಬಸ್‌ಗಳನ್ನು ಬುಕ್ಕಿಂಗ್ ಮಾಡಿಕೊಳ್ಳಲಾಗುತ್ತಿದೆ.

ಸ್ಕ್ರೀನಿಂಗ್ ಹಾಗೂ ಸ್ಕ್ವಾಡ್‌ಗಳಿಗೆ ನೀಡಲು 800ಕ್ಕೂ ಹೆಚ್ಚು ವಾಹನಗಳನ್ನು ಬಳಸಾಗುತ್ತಿದೆ. ಬಿಎಂಟಿಸಿ, ಪೊಲೀಸ್ ಇಲಾಖೆ, ಬಿಬಿಎಂಪಿ, ಆರ್‌ಟಿಒ ಹಾಗೂ ಸಾರಿಗೆ ಸಿಬ್ಬಂದಿ ಪಿಕಪ್ ಹಾಗೂ ಡ್ರಾಪ್‌ಗೂ ವಾಹನಗಳನ್ನು ಬಳಸಲಾಗುತ್ತದೆ. ಮೇ.5ರಿಂದ 15ರವರೆಗೆ ಸಾರ್ವಜನಿಕರಿಗೆ ಬಸ್‌ಗಳ ಕೊರತೆ ಕಾಣಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!