ಬರ್ತಡೇ ಕೇಕ್ ತಿಂದು 10 ವರ್ಷದ ಬಾಲಕಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಂಜಾಬ್​ನ ಪಟಿಯಾಲದಲ್ಲಿ ಹುಟ್ಟುಹಬ್ಬಕ್ಕೆ ತರಿಸಿದ್ದ ಕೇಕ್​ ಸೇವಿಸಿ 10 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಮಾರ್ಚ್ 24 ರಂದು ಮಗಳ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲು ಪೋಷಕರು ಪಂಜಾಬ್​ನ ಪಟಿಯಾಲದಲ್ಲಿರುವ ಬೇಕರಿಯೊಂದರಲ್ಲಿ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದಾರೆ.

ಕೇಕ್ ತಿಂದ ಸೇವಿಸಿದ ಕುಟುಂಬಸ್ಥರಿಗೆ ಹಾಗೂ ಬಾಲಕಿಕೆ ವಾಕರಿಕೆ ಹಾಗೂ ವಾಂತಿಯಾಗಿದೆ ಇದನ್ನು ಅರಿತ ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ 10 ವರ್ಷದ ಬಾಲಕಿ ಮಾನ್ವಿ ಆಸ್ಪತ್ರೆಗೆ ತಲುಪಿದ ನಂತರ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

ಫುಡ್​ ಪಾಯ್ಸನ್​ ನಿಂದಾಗಿ ಈ ದಾರುಣ ಘಟನೆ ಸಂಭವಿಸಿದೆ ಎನ್ನಲಾಗಿದೆ. ಬೇಕರಿ ಅಂಗಡಿ ಮಾಲೀಕರ ವಿರುದ್ಧ ಐಪಿಸಿ ಸೆಕ್ಷನ್​ 273,304ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸ್ಥಳೀಯ ವರದಿಗಳು ಹೇಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!