ಅಯೋಧ್ಯೆಯ ಬಾಲ ರಾಮನಿಗೂ ತಟ್ಟಿದ ‘ಸೆಕೆ’: ವಿಗ್ರಹಕ್ಕೆ ಹತ್ತಿ ಬಟ್ಟೆಯ ಅಲಂಕಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಯೋಧ್ಯೆ ರಾಮಮಂದಿರದಲ್ಲಿ (Ayodhya Ram Mandir) ಇಂದಿನಿಂದ ಬಾಲಕ ರಾಮ ಆರಾಮದಾಯಕ ಹತ್ತಿ ಉಡುಪಿನಿಂದ ಕಂಗೊಳಿಸುತ್ತಿದ್ದಾನೆ.

ನಾಡಿನಲ್ಲಿ ಬೇಸಿಗೆ ಋತು ಮತ್ತು ಹೆಚ್ಚುತ್ತಿರುವ ತಾಪಮಾನದ ಹಿನ್ನೆಲೆಯಲ್ಲಿ ರಾಮನ ವಿಗ್ರಹಕ್ಕೆ ಹತ್ತಿ ಬಟ್ಟೆಯನ್ನು ತೊಡಿಸಲಾಗಿದೆ ಎಂದು ಶ್ರೀರಾಮ ಜನ್ಮ ಭೂಮಿ ತೀರ್ಥಕೇತ್ರ ಟ್ರಸ್ಟ್‌ (Shri Ram Janmbhoomi Theerth Kshetra) ತಿಳಿಸಿದೆ.

ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡ ಟ್ರಸ್ಟ್, ‘ಬೇಸಿಗೆ ಮತ್ತು ಹೆಚ್ಚುತ್ತಿರುವ ತಾಪಮಾನದ ಹಿನ್ನೆಲೆಯಲ್ಲಿ ಇಂದಿನಿಂದ ಭಗವಾನ್ ಶ್ರೀ ರಾಮಲಲ್ಲಾ ವಿಗ್ರಹಕ್ಕೆ ಹತ್ತಿ ವಸ್ತ್ರವನ್ನು ತೊಡಿಸಲಾಗಿದೆ. ರಾಮಲಲಾ ಇಂದು ಧರಿಸಿರುವ ವಸ್ತ್ರವನ್ನು ಕೈಮಗ್ಗದ ಹತ್ತಿಯಿಂದ ತಯಾರಿಸಲಾಗಿದೆ. ನೈಸರ್ಗಿಕ ನೀಲಿ ಬಣ್ಣ ಬಳಿಯಲಾಗಿದ್ದು, ಗೊಟ್ಟಾ ಹೂವುಗಳಿಂದ ಅಲಂಕರಿಸಲಾಗಿದೆ’ ಎಂದು ತಿಳಿಸಲಾಗಿದೆ.

ಜಾಗತಿಕ ತಾಪಮಾನ ಹೆಚ್ಚಳ ಭಾರತದಲ್ಲಿಯೂ ಪರಿಣಾಮ ಬೀರಿದ್ದು, ವಿವಿಧ ನಗರಗಳಲ್ಲಿ ತೀವ್ರ ತಾಪಮಾನ ದಾಖಲಾಗುತ್ತಿದೆ. ಮಾರ್ಚ್ 28ರಂದು ತಾಪಮಾನವು 41 ಡಿಗ್ರಿ ಸೆಲ್ಶಿಯಸ್‌ ಮೀರಿದೆ ಎಂದು ಭಾರತ ಹವಾಮಾನ ಇಲಾಖೆ ವರದಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!