ಜಗತ್ತಿಗೆ ಮತ್ತೊಂದು ಸರ್ಪ್ರೈಸ್ ನೀಡಿದ OpenAI : ಜಸ್ಟ್ 15 ಮಾತಾಡಿದ್ರೆ ಸಾಕು, ನಿಮ್ಮ ಧ್ವನಿಯ ಪಡಿಯಚ್ಚು ರೆಡಿ!!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ChatGPT ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಮೂಲಕ ಜಗತ್ತನ್ನೇ ತಲ್ಲಣಗೊಳಿಸಿದ್ದ OpenAI ಈಗ ತಾನು ’ವಾಯ್ಸ್ ಕ್ಲೋನ್’ ತಂತ್ರಜ್ಞಾನವನ್ನು ತಯಾರಿಸಿದೆ ಎಂದು ಹೇಳಿಕೊಂಡಿದೆ.

ಈ ನೂತನ ತಂತ್ರಜ್ಞಾನದ ಮೂಲಕ ಕ್ಲೋನ್ ಮಾಡಬೇಕಾದ ಧ್ವನಿಯ ಮಾಲೀಕರು ಧ್ವನಿಯನ್ನು ೧೫ ಸೆಕೆಂಡುಗಳ ಕಾಲ ರೆಕಾರ್ಡ್ ಮಾಡಿದರೆ ಸಾಕು, ಅವರ ಪಡಿಯಚ್ಚನಂತಾ ಧ್ವನಿ ಸಿದ್ಧವಾಗುತ್ತದೆ.ಆದರೆ ತಂತ್ರಜ್ಞಾನದ ದುರುಪಯೋಗದ ಸಾಧ್ಯತೆಯ ಕಾರಣ ಈ ಧ್ವನಿ ಕ್ಲೋನ್ ತಂತ್ರಜ್ಞಾನವನ್ನು ಸದ್ಯ ಸಾರ್ವಜನಿಕವಾಗಿಸುತ್ತಿಲ್ಲ. ಮಾಲಿಕರಿಗೆ ಅರಿವಿಲ್ಲದೆ ಅವರ ಧ್ವನಿಯಲ್ಲಿ ಸಂದೇಶವನ್ನು ರಚಿಸುವ ಸಾಧ್ಯತೆ ಹಾಗೂ ಈ ವರ್ಷ ಅನೇಕ ದೇಶಗಳಲ್ಲಿ ಚುನಾವಣೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ಕಾರಣಗಳಿಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!