ಹೊಸದಿಗಂತ ವರದಿ ಹುಬ್ಬಳ್ಳಿ:
ರಾಜ್ಯದಲ್ಲಿ ಆಡಳಿತ ಕೆಟ್ಟ ವ್ಯವಸ್ಥೆ, ಬರಗಾಲವಿದ್ದರು ಪರಿಹಾರ ನೀಡದಿರುವುದು, ದೇಶದಲ್ಲಿ ಅರಾಜಕತೆ ಸೃಷ್ಟಿಸುವುದು ಸೇರಿದಂತೆ ಅನೇಕ ವಿದ್ಯಮಾನ ಗಮನಿಸುತ್ತಿರುವ ಪದವೀಧರರು ಕಾಂಗ್ರೆಸ್ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಈ ಹಿನ್ನೆಲೆ ಬಿಜೆಪಿಗೆ ಮತ ಹಾಕಲಿದ್ದು, ನಾಲ್ಕು ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಶುಕ್ರವಾರ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಹಿನ್ನಲೆ ಇಲ್ಲಿಯ ಕೇಶ್ವಾಪುರದ ಫಾತಿಮಾ ಪ್ರೌಢಶಾಲೆ ಮತಗಟ್ಟೆಯಲ್ಲಿ ಮತ ಹಾಕಿ ಬಳಿ ಮಾತನಾಡಿದರು.
ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳ ಸಂಸ್ಕೃತಿ ಎಲ್ಲರಿಗೂ ಧಕ್ಕೆ ತರುವ ವಿಷಯವಾಗಿವೆ. ಬರಗಾಲವಿದ್ದರೂ ಸಹ ಸರ್ಕಾರ ಸ್ಟಿಂಗ್, ಭ್ರಷ್ಟಾಚಾರ ನಡೆಸುವ ಮೂಲಕ ಕೆಟ್ಟ ಆಡಳಿತ ವ್ಯವಸ್ಥೆ ನಡೆಸುತ್ತಿದೆ. ಹಿಂದೆ ಬಿಜೆಪಿ ಬೊಮ್ಮಾಯಿ ಸರ್ಕಾರವಿದ್ದಾಗ 13 ಸಾವಿರ ಪರಿಹಾರ ನೀಡಲಾಗಿತ್ತು. ಇವರು 2 ಸಾವಿರ ಘೋಷಣೆ ಮಾಡಿದ್ದು, ಇಲ್ಲಿವರೆಗೂ ಅದನ್ನು ನೀಡಿಲ್ಲ. ರಾಜ್ಯ ಸರ್ಕಾರದ ದಿವಾಳಿಯಾಗಿದೆ. ಕಾಂಗ್ರೆಸ್ ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿದೆ ಎಂದು ಕಿಡಿಕಾರಿದರು.
ಪದವೀಧರರು ಮತ ಹಾಕಲು ಹಣ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ನಿವೃತ್ತರಿಗೆ ಪಿಂಚಣಿಗೂ ಹಣ ನೀಡದ ಸರ್ಕಾರ ಚುನಾವಣೆ ಗೆಲ್ಲಲು ಹಣ ನೀಡುತ್ತಿದೆ ಎಂದು ಆರೋಪಿಸಿದರು. ಈ ಚುನಾವಣೆ ದಿಕ್ಸೂಚಿ ಅನ್ನುವುದಕ್ಕಿಂತ ಸರ್ಕಾರಕ್ಕೆ ಎಚ್ಚರಿಗೆ ಸಂದೇಶವಾಗಲಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ರಾಜಕೀಯ ಮೌಲ್ಯಗಳು ಕುಸಿದಿದೆ. ಮುಖ್ಯಮಂತ್ರಿ ಅವರು ಸಿದ್ದರಾಮಯ್ಯ ಜೊತೆ ವೈಚಾರಿಕಾ ಭಿನ್ನಾಭಿಪ್ರಾಯವಿದೆ. 25 ವರ್ಷ ದಾಟಿದ ಅವರನ್ನು ಪೆನ್ ಡ್ರೈವ್ ತೋರಿಸಿ ಹೆದರಿಸಿದ್ದಾರೆ. ಅದರ ಹಿಂದೆ ಯಾರಿದ್ದಾರೆ ಎಂದು ಕಾಂಗ್ರೆಸ್ ಹೈಕಮಾಂಡ ಹೇಳಬೇಕು ಎಂದರು.



