October 23, 2026
Friday, October 23, 2026
spot_img

‘ಜೈಲರ್ 2’ ಬಾಕ್ಸ್‌ಆಫೀಸ್ ಅಬ್ಬರ: ಕಲೆಕ್ಷನ್‌ನಲ್ಲಿ ಹೊಸ ಇತಿಹಾಸ ಬರೆದ ರಜನಿಕಾಂತ್ ಸಿನಿಮಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಸೃಷ್ಟಿಸಿರುವ ದಾಖಲೆ ಅಷ್ಟಿಷ್ಟಲ್ಲ. ಸಾಲು ಸಾಲು ರಜೆಗಳು ಮುಗಿದು ಕೆಲಸದ ದಿನಗಳು ಆರಂಭವಾದರೂ, ಸಿನಿಮಾದ ಹವಾ ಮಾತ್ರ ತಗ್ಗಿಲ್ಲ. ಪ್ರೇಕ್ಷಕರು ಮುಗಿಬಿದ್ದು ಚಿತ್ರಮಂದಿರಗಳಿಗೆ ಬರುತ್ತಿದ್ದು, ಸಿನಿಮಾ ಯಶಸ್ವಿ ಪ್ರದರ್ಶನ ಮುಂದುವರಿಸಿದೆ.

ಚಿತ್ರವು ಮೊದಲ ವಾರದ ಅಂತ್ಯಕ್ಕೆ ಅಂದಾಜು 374 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಈ ಮೂಲಕ 2018ರಲ್ಲಿ ಬಂದ ‘2.0’ ಸಿನಿಮಾದ 365 ಕೋಟಿ ದಾಖಲೆಯನ್ನು ಮುರಿದು, ತಮಿಳು ಚಿತ್ರರಂಗದಲ್ಲೇ ಅತ್ಯಂತ ದೊಡ್ಡ ಕಲೆಕ್ಷನ್ ಎಂಬ ಹೆಗ್ಗಳಿಗೆ ಪಾತ್ರವಾಗಿದೆ. ಗುರುವಾರ ಒಂದೇ ದಿನ ಅಂದಾಜು 18.50 ಕೋಟಿ ಗಳಿಸುವ ಮೂಲಕ ತನ್ನ ಬಲವನ್ನು ಸಾಬೀತುಪಡಿಸಿದೆ.

ಕೇವಲ ಭಾರತದಲ್ಲಷ್ಟೇ ಅಲ್ಲದೆ, ವಿದೇಶಿ ಮಾರುಕಟ್ಟೆಯಲ್ಲೂ ಸಿನಿಮಾ ಧೂಳೆಬ್ಬಿಸುತ್ತಿದೆ. ವಿದೇಶಗಳಲ್ಲಿ ಬರೋಬ್ಬರಿ 209 ಕೋಟಿ ರೂಪಾಯಿ ಬಾಚಿಕೊಂಡಿರುವ ಸಿನಿಮಾ, ಒಟ್ಟು ಜಾಗತಿಕ ಗಳಿಕೆಯನ್ನು 583 ಕೋಟಿ ರೂಪಾಯಿಗೆ ತಲುಪಿಸಿದೆ. ಇಂದು ಈ ಚಿತ್ರವು 600 ಕೋಟಿ ಮೈಲಿಗಲ್ಲು ದಾಟಲಿದ್ದು, ಭಾನುವಾರದೊಳಗೆ ಸಾರ್ವಕಾಲಿಕ ದಾಖಲೆ ಬರೆಯುವ ಮುನ್ಸೂಚನೆ ನೀಡಿದೆ.

ತಮಿಳುನಾಡಿನಲ್ಲಿ ಇದುವರೆಗೆ 139 ಕೋಟಿ ಕಲೆಕ್ಷನ್ ಮಾಡಿದೆ. ಮುಂದಿನ ವಾರದಲ್ಲಿ ಈ ಚಿತ್ರವು ತಮಿಳುನಾಡಿನಲ್ಲಿ ಸಾರ್ವಕಾಲಿಕ ಅಗ್ರ ನಾಲ್ಕು ಸ್ಥಾನಗಳಲ್ಲಿ ಯಾವ ಸ್ಥಾನ ಪಡೆದುಕೊಳ್ಳಲಿದೆ ಎಂಬುದು ಸ್ಪಷ್ಟವಾಗಲಿದೆ. ಒಟ್ಟಿನಲ್ಲಿ ರಜನಿಕಾಂತ್ ಅವರ ಮ್ಯಾಜಿಕ್ ಬಾಕ್ಸ್‌ ಆಫೀಸ್‌ನಲ್ಲಿ ಮತ್ತೊಮ್ಮೆ ಸಾಬೀತಾಗಿದೆ.

Must Read