ಹೊಸದಿಗಂತ ವರದಿ ಕೊಪ್ಪಳ:
ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನ ಕಾರ್ಯವು ಅಕ್ಟೋಬರ್ 23ರಂದು ಕೊಪ್ಪಳ ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಸುಗಮವಾಗಿ ಆರಂಭವಾಗಿದ್ದು ಬೆಳಗಿನ 10 ಗಂಟೆವರೆಗೆ ಶೇ.12.42ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಇಟ್ನಾಳ ಅವರು ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಕೊಪ್ಪಳ, ಗಂಗಾವತಿ, ಕಾರಟಗಿ, ಕನಕಗಿರಿ, ಕುಷ್ಟಗಿ, ಯಲಬುರ್ಗಾ ಮತ್ತು ಕುಕನೂರ ತಾಲೂಕುಗಳಲ್ಲಿನ ಒಟ್ಟು 20 ಮತದಾನ ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಮತದಾನ ಆರಂಭವಾಗಿದೆ.
ಬೆಳಗ್ಗೆ 8 ಗಂಟೆಯಿಂದ 10 ಗಂಟೆವರೆಗಿನ ಸಮಯದಲ್ಲಿ, ಒಟ್ಟು 1845 ಪುರುಷ ಮತದಾರರ ಪೈಕಿ 241 ಜನರು ಹಾಗೂ ಒಟ್ಟು 869 ಮಹಿಳಾ ಮತದಾರರ ಪೈಕಿ 96 ಜನರು ಮತಚಲಾಯಿಸಿದ್ದು ಶೇ.12.42ರಷ್ಟು ಮತದಾನದ ಪ್ರಮಾಣ ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.



