ಅಫ್ಘಾನಿಸ್ತಾನದಲ್ಲಿ ಎಲ್ಲೆಡೆ ಶವಗಳ ರಾಶಿ: ಸಾವಿನ ಸಂಖ್ಯೆ 2,445ಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭಾರೀ ಭೂಕಂಪದಿಂದಾಗಿ ಹೆರಾತ್ ನಗರದ ಎಲ್ಲೆಡೆ ಹೆಣಗಳ ರಾಶಿ ಕಂಡುಬರುತ್ತಿವೆ. ಭೂಕಂಪದಿಂದ ಇದುವರೆಗೂ ಸತ್ತವರ ಸಂಖ್ಯೆ 2,445 ಕ್ಕೆ ಏರಿದೆ, 2,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಫ್ಘಾನ್ ವಿಪತ್ತು ಸಚಿವಾಲಯದ ವಕ್ತಾರ ಜನನ್ ಸಾಯಿಕ್ ಹೇಳಿದ್ದಾರೆ. ಭೂಕಂಪನ ಪೀಡಿತ ಪರ್ವತ ಪ್ರದೇಶದಲ್ಲಿ ಆಗಾಗ್ಗೆ ಅಲುಗಾಟದ ಸನ್ನಿವೇಶಗಳು ಸಂಭವಿಸುತ್ತಿವೆ.

ಅಫ್ಘಾನಿಸ್ತಾನದ ಹೆರಾತ್‌ ನಗರದಲ್ಲಿ ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ರಿಕ್ಟರ್‌ ಮಾಪನದಂತೆ 4.3ರ ತೀವ್ರತೆಯ ಭೂಕಂಪ ಸಂಭವಿಸಿದೆ. ಹಾಗೆಯೇ, ಇದಾದ ಬಳಿಕ ಮಧ್ಯಾಹ್ನ 12.11ರ ಸುಮಾರಿಗೆ 6.1 ತೀವ್ರತೆಯ ಭೂಕಂಪ ಉಂಟಾಗಿದೆ. ಅಷ್ಟೇ ಅಲ್ಲ, ಮಧ್ಯಾಹ್ನ 12.42ರ ಸುಮಾರಗೆ 6.2ರ ತೀವ್ರತೆಯಲ್ಲಿ ಭೂಮಿ ಕಂಪಿಸಿದೆ.

ಇರಾನ್‌ನ ಗಡಿ ಪ್ರದೇಶದಲ್ಲಿ ಹತ್ತು ರಕ್ಷಣಾ ತಂಡಗಳಿವೆ ಎಂದು ಸಾಯಿಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕತಾರ್‌ನಲ್ಲಿರುವ ತಾಲಿಬಾನ್‌ನ ರಾಜಕೀಯ ಕಚೇರಿಯ ಮುಖ್ಯಸ್ಥ ಸುಹೇಲ್ ಶಾಹೀನ್ ಮಾಧ್ಯಮಗಳಿಗೆ ಮಾತನಾಡಿ, ಆಹಾರ, ಕುಡಿಯುವ ನೀರು, ಔಷಧಿಗಳು, ಬಟ್ಟೆ ಮತ್ತು ಟೆಂಟ್‌ಗಳು ರಕ್ಷಣೆ ಮತ್ತು ಪರಿಹಾರಕ್ಕಾಗಿ ತುರ್ತಾಗಿ ಅಗತ್ಯವಿದೆ. ಭೂಕಂಪ ಪೀಡಿತ ಪ್ರದೇಶಗಳಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!