ಪಾಕಿಸ್ತಾನದಲ್ಲಿ ಭೀಕರ ದುರಂತ: ಮಿನಿಬಸ್‌ ಕಣಿವೆಗೆ ಉರುಳಿ 11 ಮಕ್ಕಳು ಸೇರಿ 20 ಜನರು ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ದಕ್ಷಿಣ ಪಾಕಿಸ್ತಾನದ ಆಳವಾದ ಮತ್ತು ನೀರಿನಿಂದ ತುಂಬಿರುವ ಕಂದಕಕ್ಕೆ ಮಿನಿಬಸ್ ಉರುಳಿದ ಪರಿಣಾಮ 11 ಮಕ್ಕಳು ಸೇರಿದಂತೆ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಅಪಘಾತದಲ್ಲಿ ಇನ್ನೂ 14 ಮಂದಿ ಗಾಯಗೊಂಡಿದ್ದಾರೆ. ಹದಗೆಟ್ಟ ಹೆದ್ದಾರಿಗಳು ಮತ್ತು ಅಜಾಗರೂಕ ಚಾಲನೆಯಿಂದಾಗಿ ಪಾಕಿಸ್ತಾನದಲ್ಲಿ ರಸ್ತೆ ಸಾವುಗಳ ಪ್ರಮಾಣ ದಿಗ್ಭ್ರಮೆಗೊಳಿಸುವ ಮಟ್ಟದಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ, 2018 ರಿಂದೀಚೆಗೆ ಪಾಕಿಸ್ತಾನದ ರಸ್ತೆಗಳಲ್ಲಿ 27,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಸಿಂಧ್ ಪ್ರಾಂತ್ಯದಲ್ಲಿ ಸಂಚರಿಸುತ್ತಿದ್ದ ಬಸ್ಸು ನಿಯಂತ್ರನ ಕಳೆದುಕೊಂಡು ನೀರು ತುಂಬಿದ ಕಂದಕಕ್ಕೆ ಬಿದ್ದಿತು” ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಖಾದಿಮ್ ಹುಸೇನ್ ತಿಳಿಸಿದ್ದಾರೆ. “ಡ್ರೈವರ್‌ ರಸ್ತೆಯ ತಿರುವು ಚಿಹ್ನೆಯನ್ನು ಸರಿತಯಾಗಿ ಗಮನಿಸಲಿಲ್ಲ. ಆದ್ದರಿಂದ ವ್ಯಾನ್ ಸೆಹ್ವಾನ್ ಷರೀಫ್ ಪಟ್ಟಣದ ಬಳಿ 25 ಅಡಿ ಆಳದ ಕಂದಕಕ್ಕೆ ಧುಮುಕಿದೆ” ಎಂದು ಅವರು ಹೇಳಿದ್ದಾರೆ.
ಸಾವಿಗೀಡಾದ ಮಕ್ಕಳು ಎರಡರಿಂದ ಎಂಟು ವರ್ಷ ವಯಸ್ಸಿನವರಾಗಿದ್ದು, ಮಾರಣಾಂತಿಕವಾಗಿ ಗಾಯಗೊಂಡಾಗ ಅವರ ಹೆತ್ತವರ ಮಡಿಲಲ್ಲಿ ಕುಳಿತುಕೊಂಡಿರಬಹುದು ಎಂದು ಹುಸೇನ್ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!