ರಷ್ಯಾ ಸೇನಾ ತರಬೇತಿ ಕೇಂದ್ರದ ಮೇಲೆ ಗುಂಡಿನ ದಾಳಿ: 11 ಜನರು ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಉಕ್ರೇನ್ ಗಡಿಯಲ್ಲಿರುವ ಬೆಲ್ಗೊರೊಡ್ ಪ್ರದೇಶದ ರಷ್ಯಾದ ಮಿಲಿಟರಿ ತರಬೇತಿ ಕೇಂದ್ರದ ಮೇಲೆ ಸೋವಿಯತ್‌ ರಾಜ್ಯದ ಇಬ್ಬರು ಮಾಜಿ ನಾಗರಿಕರು ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 11 ಮಂದಿ ಸಾವನ್ನಪ್ಪಿ 15 ಮಂದಿ ಗಾಯಗೊಂಡಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯವನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ರಷ್ಯಾ ಈ ದಾಳಿಯನ್ನು ಭಯೋತ್ಪಾದಕ ದಾಳಿ ಎಂದು ಕರೆದಿದೆ. ನಾಗರಿಕರಿಗೆ ಸೈನಿಕ ತರಬೇತಿ ನೀಡುತ್ತಿದ್ದ ವೇಳೆ ಅಲ್ಲಿಗೆ ಆಗಮಿಸಿದ ಇಬ್ಬರು ವ್ಯಕ್ತಿಗಳು ಗುಂಡು ಹಾರಿಸಿದರು. ಈ ವೇಳೆ ನಡೆಸಿದ ಪ್ರತಿದಾಳಿಯಲ್ಲಿ ಫೈರಿmಗ್‌ ಮಾಡಿದ ಇಬ್ಬರು ಕೊಲ್ಲಲ್ಪಟ್ಟಿದ್ದಾರೆ ಎಂದು ಸಚಿವಾಲಯವು ತಿಳಿಸಿದೆ.
ಉಕ್ರೇನ್‌ ಮೇಲಿನ ದಾಳಿಯಲ್ಲಿ ಅಪಾರ ಸಂಖ್ಯೆಯ ಸೈನಿಕರನ್ನು ಕಳೆದುಕೊಂಡಿರುವ ರಷ್ಯಾ, ಸೇನೆಯನ್ನು ಮರುಸಜ್ಜುಗೊಳಿಸುವ ಉದ್ದೇಶದಿಂದ ಸೆ. 21 ರ ನಂತರ 200,000 ಕ್ಕೂ ಹೆಚ್ಚು ಜನರನ್ನುದೇಶದ ಸಶಸ್ತ್ರ ಪಡೆಗಳಿಗೆ ಸೇರ್ಪಡೆಗೊಳಿಸಿದೆ. ಕಡ್ಡಾಯ ಸೇನಾಸೇವೆ ನೀತಿಗೆ ಭಾರಿ ಪ್ರತಿರೋಧ ವ್ಯಕ್ತವಾಗಿದ್ದು, ನೇಮಕಾತಿ ಕಚೇರಿಗಳ ಮೇಲೆ ಜನರಿಂದ ಹಲವಾರು ದಾಳಿಗಳು ನಡೆದಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!