Thursday, December 1, 2022

Latest Posts

ಹಳೆ ದ್ವೇಷದ ಹಿನ್ನೆಲೆ: ವ್ಯಕ್ತಿಗೆ ಚಾಕು ಇರಿದು ಕೊಲೆ ಯತ್ನ

ಹೊಸದಿಗಂತ ವರದಿ ಹುಬ್ಬಳ್ಳಿ:

ಹಳೆಯ ದ್ವೇಷದ ಹಿನ್ನೆಲೆ ಯುವಕನೋರ್ವ ಕಮರಿಪೇಟ 2ನೇ ಕ್ರಾಸ್ ನಿವಾಸಿ ರಾಜೇಶ ಕಠಾರೆಗೆ ಚಾಕುವಿನಿಂದ ಇರಿದ ಕೊಲೆ ಮಾಡಲು ಯತ್ನಿಸಿದ ಘಟನೆ ಶನಿವಾರ ತಡ ರಾತ್ರಿ ನಡೆದಿದೆ. ಕಮರಿಪೇಟ ನಿವಾಸಿ ವೆಂಕಟೇಶ್ ಕಠಾರೆ ಚಾಕು ಇರಿದ ವ್ಯಕ್ತಿ. ರಾಜೇಶ ಕಠಾರೆ ಜೊತೆ ವೆಂಕಟೇಶ್ ಪದೆ ಪದೇ ಜಗಳವಾಡುತ್ತಿದ್ದ. ನಗರದ ಹಿರಿಯರ ಸಮಕ್ಷಮದಲ್ಲಿ ವೆಂಕಟೇಶ್ ಕಠಾರೆಗೆ ಬುದ್ದಿ ಹೇಳಿಸಲಾಗಿತ್ತು.

ಈ ವಿಚಾರವನ್ನು ಇಟ್ಟಕೊಂಡು ದ್ವೇಷ ಸಾಧಿಸಲು ವೆಂಕಟೇಶ್ ಕಠಾರೆ ರಾಜೇಶ್‌ಗೆ ಚಾಕುವಿನಿಂದ ಎಡಗಡೆ ಎದೆಯ ಭಾಗ, ಹೊಟ್ಟೆ ಹಾಗೂ ಮುಖಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿ, ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ.

ಹಲ್ಲೆಗೊಳಗಾದ ರಾಜೇಶ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆ ರವಾನಿಸಲಾಗಿದೆ. ಸದ್ಯ ರಾಜೇಶ ಅವರ ತಂದೆ ಪಾಂಡುರಂಗ ಸಾ ಕಠಾರೆ ಕಮರಿಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!