August 24, 2026
Monday, August 24, 2026
spot_img

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 11,868 ಮತದಾರರು ಕರಡು ಪ್ರತಿಯಿಂದ ಹೊರಕ್ಕೆ : ನೋಂದಣಾಧಿಕಾರಿ ಜಯಲಕ್ಷ್ಮಿ ರಾಯಕೋಡ

ಹೊಸದಿಗಂತ ವರದಿ ಸುಳ್ಯ:

ಕರ್ನಾಟಕ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ-2026 ವೇಳಾಪಟ್ಟಿಯಂತೆ 207 ಸುಳ್ಯ ವಿಧಾನಸಭಾ ಕ್ಷೇತ್ರದ ಕರಡು ಮತದಾರರ ಪಟ್ಟಿಯ ಕುರಿತು ಮತದಾರ ನೋಂಧಣಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಯಲಕ್ಷ್ಮಿ ರಾಯಕೋಡ ಸುದ್ದಿಗೋಷ್ಟಿಯಲ್ಲಿ ಸೋಮವಾರ ಮಾಹಿತಿ ನೀಡಿದರು.

ಅವರು ಸುಳ್ಯ ತಾಲೂಕು ಕಛೇರಿ ಸಭಾಂಗಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2002 ರ ಮತದಾರ ಪಟ್ಟಿಯಂತೆ 2,08,487 ಮತದಾರರಿದ್ದು ಇವುಗಳ ಪೈಕಿ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಯಂತೆ ಕರಡು ಪ್ರತಿಯಲ್ಲಿ 1,96,619 ಮತದಾರರನ್ನು ಒಳಗೊಂಡಿದ್ದು ಉಳಿದಂತೆ 11,868 ಮತದಾರರು ಕರಡು ಪ್ರತಿಯಿಂದ ಹೊರಹಾಕಲಾಗಿದ್ದು ಹೊರಹಾಕಲಾಗಿದೆ. ಮತದಾರರು ಮತ್ತೊಮ್ಮೆ ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿದ್ದು ಅವರಿಗೆ ತಿಳುವಳಿಕೆ ಪತ್ರವನ್ನು ಕ್ರಮವಾಗಿ 7,5,3 ದಿನಗಳಂತೆ 3 ಬಾರಿ ನೀಡಲಾಗುವುದು.ಮನೆಯಲ್ಲಿ ಇಲ್ಲದ ಪಕ್ಷದಲ್ಲಿ ತಿಳುವಳಿಕೆ ಪತ್ರವನ್ನು ಅಂಟಿಸುವ ಮೂಲಕ ತಿಳಿಯ ಪಡಿಸಿ ಬಳಿಕ ಸಲ್ಲಿಕೆಯಾದ 12 ವಿಧದ ದಾಖಲೆಗಳಲ್ಲಿ ಒಂದನ್ನು ಸಲ್ಲಿಸಿದಾಗ ಮತದಾರ ನೋಂದಣಿ ಅಧಿಕಾರಿಯು ಮತದಾರರ ದಾಖಲೆಗಳನ್ನು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಅರ್ಜಿ ಸಲ್ಲಿಸಿ ದಾಖಲೆಗಳನ್ನು ಒದಗಿಸಿ

ಅಲ್ಲದೇ ರಾಜ್ಯ ಚುನಾವಣಾ ಆಯೋಗದ ಸೂಚನೆಯಂತೆ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಯನ್ನು ಬಿಎಲ್ಒ ಹಾಗೂ ಸ್ಥಳೀಯ ಪಂಚಾಯತ್ ಹಾಗೂ ಪಂಚಾಯತ್ ರಾಜ್ ಇಲಾಖೆ ಮತ್ತು ಕಂದಾಯ ಇಲಾಖೆಗಳ ಸಿಬ್ಬಂದಿಗಳ ಮೂಲಕ ಪ್ರತಿ ಮನೆಗಳನ್ನು ತಲುಪಿ ಅರ್ಜಿ ನಮೂನೆಗಳನ್ನು ವಿತರಿಸಲಾಗಿದ್ದು ಅದರಂತೆಯೇ ಅವುಗಳನ್ನು ಭರ್ತಿ ಗೊಳಿಸಿದ ಬಳಿಕ ಪಡೆದುಕೊಂಡು ಅಂತರ್ಜಾಲಕ್ಕೆ ಸೇರ್ಪಡೆಗೊಳಿಸಲಾಗಿ ಅಂತಿಮವಾಗಿ ಕರಡು ಪ್ರತಿಯನ್ನು ಪ್ರಕಟಿಸಲಾಗಿದೆ ಎಂದು ಅವರು ತಿಳಿಸಿದರು.‌

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಪರಿಷ್ಕರಣೆಯಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ಹಾಗೂ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗಳ ಸಹಕಾರದಿಂದ ಸಂಪೂರ್ಣವಾಗಿ ಯಶಸ್ವಿಯಾಗಿ ನಡೆದಿದೆ ಎಂದು ವಿವರಿಸಿದರು. ಅಲ್ಲದೇ ಹೊರಹಾಕಲಾದ ಹೆಸರುಗಳು ದ್ವಿಪ್ರತಿ,ವರ್ಗಾವಣೆ, ಮೃತ,ವಿಳಾಸ ಬದಲಾವಣೆ ಸೇರಿದಂತೆ ಇತರೆ ಕಾರಣಗಳಿಂದ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 11,868 ಮತದಾರರನ್ನು ಕರಡು ಪ್ರತಿಯಿಂದ ಕೈ ಬಿಡಲಾಗಿದ್ದು ಇದರಲ್ಲಿ ಅರ್ಜಿ ಸಲ್ಲಿಸಿ ದಾಖಲೆಗಳನ್ನು ಒದಗಿಸಿದಲ್ಲಿ ಸೇರ್ಪಡೆಗೆ ಅವಕಾಶವು ಕಲ್ಪಿಸಲಾಗಿದ್ದು ಸಾರ್ವಜನಿಕರು ಕರಡು ಮತದಾರ ಪ್ರತಿಯನ್ನು ವೀಕ್ಷಿಸಲು https://ceo.karnataka.gov.in/ ನಲ್ಲಿ ವೀಕ್ಷಿಸಬಹುದಾಗಿದೆ ಎಂದು ತಿಳಿಸಿದ್ದಾರೆ. ಸುದ್ದಿಗೋಸ್ಟಿಯಲ್ಲಿ ಕಡಬ ತಹಶೀಲ್ದಾರ್ ಗಣೇಶ ಸುಳ್ಯ ಉಪ ತಹಶೀಲ್ದಾರ್ ಚಂದ್ರಕಾಂತ್ ಎಂ ಆರ್ ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರ ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಪ್ರಥಮ

ರಾಜ್ಯಾದ್ಯಂತ ಕರ್ನಾಟಕ ಚುನಾವಣಾ ಆಯೋಗವು ಕೇಂದ್ರ ಚುನಾವಣಾ ಆಯೋಗದ ಸೂಚನೆಯಂತೆ ಮತದಾರ ಪಟ್ಟಿ ಸಮಗ್ರ ಪರಿಷ್ಕರಣೆಯನ್ನು ಹಮ್ಮಿಕೊಂಡಿದ್ದು ಅದರಂತೆ ಜಿಲ್ಲೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರವು ಜಿಲ್ಲೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದು ಇದಕ್ಕಾಗಿ ಅವಿರತವಾಗಿ ಶ್ರಮಿಸಿದ ಬಿಎಲ್ಒ,ಗ್ರಾಮ ಆಡಳಿತಾಧಿಕಾರಿಗಳು ಸ್ಥಳೀಯ ಗ್ರಾಮ ಪಂಚಾಯತ್ ಹಾಗೂ ಪಂಚಾಯತ್ ಇಲಾಖೆ ಮತ್ತು ರಾಜಕೀಯ ಪಕ್ಷದ ನಾಯಕರುಗಳು ಮತ್ತು ಕಾರ್ಯಕರ್ತರ ಸಹಕಾರದಿಂದ ಸಂಪೂರ್ಣವಾಗಿ ಯಶಸ್ವಿಯಾಗಿದ್ದು ಜಿಲ್ಲೆಗೆ ಪ್ರಥಮ ಸ್ಥಾನವನ್ನು ಗಳಿಸುವಂತೆ ಸಹಕರಿಸಿದ ಎಲ್ಲರಿಗು ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !