Thursday, March 23, 2023

Latest Posts

ಈವರೆಗೆ 11 ಸಾವಿರ ಭಾರತೀಯರು ಉಕ್ರೇನ್‌ ನಿಂದ ಸ್ಥಳಾಂತರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧ ಇದೀಗ 10ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಬೆಳಗ್ಗೆ ಸುಮಾರು 170 ನಾಗರಿಕರನ್ನು ಹೊತ್ತ ವಿಮಾನ ದೆಹಲಿ ತಲುಪಿದೆ.

ಉಕ್ರೇನ್‌ ನಿಂದ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 170 ಭಾರತೀಯರು ಬಂದಿಳಿದಿದ್ದಾರೆ.  ಈ ಬಗ್ಗೆ ಟ್ವೀಟ್‌ ಮಾಡಿದ ಸಚಿವ ವಿ. ಮುರಳೀಧರನ್‌, ಅಪರೇಷನ್‌ ಗಂಗಾ ಯೋಜನೆ ಅಡಿಯಲ್ಲಿ ಈವರೆಗೆ ಸುಮಾರು 11,000 ಭಾರತೀಯರನ್ನು ಉಕ್ರೇನ್‌ ನಿಂದ ಸ್ಥಳಾಂತರಿಸಲಾಗಿದೆ ಎಂದರು.

ಉಕ್ರೇನ್‌ ನಲ್ಲಿರುವ ಭಾರತೀಯರ ರಕ್ಷಣೆಗೆ ಕೇಂದ್ರದ ನಾಲ್ವರು ಸಚಿವರು ಸ್ಥಳಾಂತರಿಸುವ ಪ್ರಕ್ರಿಯ ಮತ್ತು ಅದರ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಈಗಾಗಲೇ ವಾಯುಪಡೆಯ ಸಿ-17 ವಿಮಾನ ಸೇರಿದಂರೆ ಇತರ ವಿಮಾನಗಳನ್ನು ಪ್ರಜೆಗಳ ಸ್ಥಳಾಂತರಕ್ಕಾಗಿ ನಿಯೋಜಿಸಲಾಗಿದೆ.

ಈ ನಡುವೆ ಭಾರತ ಹಾಗೂ ರಷ್ಯಾ ನಡುವಿನ ಮಾತುಕತೆ ಬಳಿಕರಷ್ಯಾದ 130 ಬಸ್‌ ಗಳು ಉಕ್ರೇನ್‌ ನಲ್ಲಿರುವ ಭಾರತೀಯರನ್ನು ಗಡಿಗೆ ತಲುಪಿಸಲು ಸಹಾಯ ಮಾಡಲು ಸಜ್ಜಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!