Thursday, March 23, 2023

Latest Posts

ಉಕ್ರೇನ್‌ ಮೇಲಿನ ದಾಳಿ ಖಂಡಿಸಿ ನೇರಪ್ರಸಾರದಲ್ಲಿ ರಾಜೀನಾಮೆ ನೀಡಿದ ರಷ್ಯಾದ ಟಿವಿ ಚಾನಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉಕ್ರೇನ್‌ ಮೇಲಿನ ರಷ್ಯಾದ ದಾಳಿ ಖಂಡಿಸಿ ರಷ್ಯಾದ ಟಿವಿ ಚಾನಲ್‌ ವೊಂದರ ಸಿಬ್ಬಂದಿ ವರ್ಗ ನೇರಪ್ರಸಾರದಲ್ಲಿ ರಾಜೀನಾಮೆ ನೀಡಿದ್ದಾರೆ.
ರಷ್ಯಾದ ಟಿವಿ ರೈನ್‌ ಚಾನಲ್‌ ನ ಸಿಬ್ಬಂದಿ ಉಕ್ರೇನ್ ಮೇಲೆ ಯುದ್ಧ ನಡೆಸಬೇಡಿ ಎಂದು ಹೇಳಿ ರಾಜೀನಾಮೆ ನೀಡಿದ್ದಾರೆ. ಬಳಿಕ ಮಾಧ್ಯಮ ಪ್ರಸಾರವನ್ನು ಸ್ಥಗಿತಗೊಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಚಾನಲ್‌ ನ ಮುಖ್ಯಸ್ಥ, ಈ ರೀತಿಯಾದಂತಹ ಯುದ್ಧವನ್ನು ನೋಡಿದ ಬಳಿಕ ಕೆಲಸ ಮಾಡಲು ಶಕ್ತಿ ಇರಬೇಕು. ಅದನ್ನು ಮತ್ತೆ ಪಡೆದುಕೊಳ್ಳಬೇಕಿದೆ. ಮುಂದಿನ ದಿನಗಳಲ್ಲಿ ಕೆಲಸಕ್ಕೆ ವಾಪಸ್ಸಾಗುವ ಭರವಸೆ ಇದೆ ಎಂದಿದ್ದಾರೆ.
ಉಕ್ರೇನ್‌ನಲ್ಲಿನ ಯುದ್ಧದ ಕ್ಷಣಗಳನ್ನು ಕವರೇಜ್‌ ಮಾಡುತಿದ್ದ ರಷ್ಯಾದ ಮಾಧ್ಯಮಗಳಿಗೆ ಸರ್ಕಾರ ಖಡಕ್‌ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ಕಂಡು ಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!