October 27, 2026
Tuesday, October 27, 2026
spot_img

ಶ್ರೀಪಂತ ಮಹಾರಾಜರ 121ನೇ ಪುಣ್ಯತಿಥಿ: ಮೂರು ದಿನ ಭಕ್ತಿಸಂಭ್ರಮ

ಹೊಸದಿಗಂತ ವರದಿ ಬೆಳಗಾವಿ:

ನಗರದ ಸಮಾದೇವಿ ಗಲ್ಲಿಯ ಶ್ರೀಪಂತ ವಾಡೆ ಹಾಗೂ ಬೆಳಗಾವಿ ತಾಲೂಕಿನ ಸುಕ್ಷೇತ್ರ ಪಂತ ಬಾಳೇಕುಂದ್ರಿಯಲ್ಲಿ ಶ್ರೀಪಂತ ಮಹಾರಾಜರ 121ನೇ ಪುಣ್ಯತಿಥಿ ಮಹೋತ್ಸವ ಅ.27ರಿಂದ 29ರವರೆಗೆ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ಮಂಗಳವಾರ ಬೆಳಗ್ಗೆ 8 ಗಂಟೆಗೆ ಬೆಳಗಾವಿಯ ಸಮಾದೇವಿ ಗಲ್ಲಿಯ ಶ್ರೀಪಂತ ವಾಡೆಯಿಂದ ಪ್ರೇಮಧ್ವಜದ ಮೆರವಣಿಗೆ ಆರಂಭವಾಗಿ, ಮಧ್ಯಾಹ್ನ 2 ಗಂಟೆಗೆ ಪಂತ ಬಾಳೇಕುಂದ್ರಿಯ ವಾಡೆ ತಲುಪಲಿದೆ. ಸಂಜೆ 5 ಗಂಟೆಗೆ ಗ್ರಾಮದ ವಾಡೆಯಿಂದ ಶ್ರೀಪಂತ ಮಹಾರಾಜರ ಮೆರವಣಿಗೆ ಆರಂಭಗೊಂಡು, ರಾತ್ರಿ 8 ಗಂಟೆಗೆ ಪ್ರೇಮಧ್ವಜಾರೋಹಣದೊಂದಿಗೆ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ.

ಬುಧವಾರ ಬೆಳಗ್ಗೆ 5 ಗಂಟೆಗೆ ಶ್ರೀಗಳ ಪುಣ್ಯಸ್ಮರಣೆ ನಡೆಯಲಿದೆ. ಬೆಳಗ್ಗೆ 7 ಗಂಟೆಗೆ ವಾಡೆಯಿಂದ ಶ್ರೀಗಳ ಪಲ್ಲಕ್ಕಿ ಮೆರವಣಿಗೆ ಹೊರಟು ದೇವಸ್ಥಾನ ತಲುಪಲಿದೆ. ರಾತ್ರಿ ಪಲ್ಲಕ್ಕಿ ಸೇವೆ ನೆರವೇರಲಿದೆ.
ಗುರುವಾರ ಮಧ್ಯಾಹ್ನ 12 ಗಂಟೆಗೆ ಮಹಾಪ್ರಸಾದ ಕಾರ್ಯಕ್ರಮ ಜರುಗಲಿದೆ. ಬಳಿಕ ಸಂಜೆ 3ರಿಂದ 5ರವರೆಗೆ ಪ್ರೇಮಾನಂದ ಟಿಪರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಜೆ 6 ಗಂಟೆಗೆ ಶ್ರೀಗಳ ಪಲ್ಲಕ್ಕಿ ಅಮರಾಯಿಯ ಪೂಜ್ಯ ಸ್ಥಳಕ್ಕೆ ಭೇಟಿ ನೀಡಿ, ಬಳಿಕ ಗ್ರಾಮದ ವಾಡೆಗೆ ಮರಳಲಿದೆ.

ಮಹೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀಪಂತ ಮಹಾರಾಜರ ಕೃಪೆಗೆ ಪಾತ್ರರಾಗಬೇಕೆಂದು ಪಂತ ಬಾಳೇಕುಂದ್ರಿ ಉತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Must Read