November 16, 2026
Monday, November 16, 2026
spot_img

ಕೆಡಿಸಿಸಿ ಬ್ಯಾಂಕ್‌ನಿಂದ ಸಹಕಾರಿ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ

ಹೊಸದಿಗಂತ ವರದಿ ಶಿರಸಿ: ​

ಶಿರಸಿ ​ನಗರದ ಕೆಡಿಸಿಸಿ ಬ್ಯಾಂಕ್ ಮುಖ್ಯ ಕಚೇರಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಕೆಡಿಸಿಸಿ ಬ್ಯಾಂಕ್ ವತಿಯಿಂದ ನೀಡುವ ದಿ. ಜಿ.ಎಸ್. ಹೆಗಡೆ ಅಜ್ಜೀಬಳ ಪ್ರಶಸ್ತಿಯನ್ನು 2023-24ನೇ ಸಾಲಿನಲ್ಲಿ ಹರಿಯಪ್ಪ ವಾಮನ ನಾಯ್ಕ (ಉತ್ತಮ ಸಹಕಾರಿ) ಮತ್ತು ಗಣಪತಿ ವಿಶ್ವೇಶ್ವರ ಭಟ್ ಯಲ್ಲಾಪುರ (ಉತ್ತಮ ಸಹಕಾರಿ ನೌಕರ) ಅವರಿಗೆ, ಹಾಗೂ 2024-25ನೇ ಸಾಲಿನಲ್ಲಿ ಶಾಂತಾರಾಮ ನಾಯಕ ಹಿಚ್ಕಡ (ಉತ್ತಮ ಸಹಕಾರಿ) ಮತ್ತು ರಾಮಕೃಷ್ಣ ಸುಬ್ರಾಯ ಹೆಗಡೆ (ಉತ್ತಮ ಸಹಕಾರಿ ನೌಕರ) ಅವರಿಗೆ ಪ್ರದಾನ ಮಾಡಲಾಯಿತು.

ಎಸ್.ಪಿ. ಪಂಡಿತ ಬಹುಮಾನವನ್ನು 2024-25ನೇ ಸಾಲಿಗೆ ಯಲ್ಲಾಪುರ ತಾಲೂಕಿನ ಉಮ್ಮಚಗಿ ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ಹಾಗೂ 2025-26ನೇ ಸಾಲಿಗೆ ಜೊಯಿಡಾ ತಾಲೂಕಿನ ಯರಮುಖಿ ನಂದಿಗದ್ದಾ ಸೇವಾ ಸಹಕಾರಿ ಸಂಘ ನಿ. ಸಂಸ್ಥೆಗಳಿಗೆ ನೀಡಿ ಗೌರವಿಸಲಾಯಿತು.

ಶಾಸಕ ಹಾಗೂ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ್ ಬ್ಯಾಂಕ್ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಸಹಕಾರಿ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿದರು.

​ಸಮಾರಂಭದಲ್ಲಿ ಬ್ಯಾಂಕ್ ಉಪಾಧ್ಯಕ್ಷ ಕೃಷ್ಣ ದೇಸಾಯಿ, ನಿರ್ದೇಶಕರಾದ ಎಸ್.ಎಲ್. ಘೋಟ್ನೇಕರ್, ಪ್ರಕಾಶ ಗುನಗಿ, ಆರ್.ಎಂ. ಹೆಗಡೆ ಬಾಳೇಸರ, ಬಾಬು ಸುಂಕೇರಿ, ರವಿ ಹೆಗಡೆ ಹುಳಗೋಳ, ರಾಜಗೋಪಾಲ ಅಡಿ, ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಮೋಹನ ನಾಯಕ್ ಗೋಕರ್ಣ, ತಿಮ್ಮಯ್ಯ ಹೆಗಡೆ, ರಾಘವೇಂದ್ರ ಶಾಸ್ತ್ರೀ, ವಿಶಾಲ್ ಭಟ್ ಹೊನ್ನಾವರ, ನಿರಂಜನ ಭಟ್, ವಿಶ್ವನಾಥ ಭಟ್, ಎಚ್.ಎಂ. ನಾಯ್ಕ, ಎಂ.ಎ. ಹೆಗಡೆ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ ಭಟ್ ಉಪಸ್ಥಿತರಿದ್ದರು.

Must Read