July 23, 2026
Thursday, July 23, 2026
spot_img

13 ದಿನದ ಕಂದಮ್ಮನ ಶವ ಸಂಪ್‌ನಲ್ಲಿ ಪತ್ತೆ: ತಂದೆಯ ಮೇಲೆಯೇ ಹ*ತ್ಯೆ ಆರೋಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿಕ್ಕಬಳ್ಳಾಪುರ ನಗರದ ಶಾಂತಿನಗರದಲ್ಲಿ 13 ದಿನಗಳ ನವಜಾತ ಹೆಣ್ಣುಮಗುವಿನ ಸಾವಿನ ಘಟನೆ ತೀವ್ರ ಆಘಾತ ಮೂಡಿಸಿದೆ. ಈ ಪ್ರಕರಣದಲ್ಲಿ ಮಗುವಿನ ತಂದೆಯ ಮೇಲೆಯೇ ಹತ್ಯೆ ಆರೋಪ ಕೇಳಿಬಂದಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

ಮಗು ನಾಪತ್ತೆಯಾಗಿ ಅನುಮಾನ

ಕುಟುಂಬದ ಮಾಹಿತಿ ಪ್ರಕಾರ, ಬುಧವಾರ ತಡರಾತ್ರಿ ಮಲಗಿದ್ದ ನವಜಾತ ಮಗು ಕಾಣೆಯಾಗಿತ್ತು. ಮಗು ಎಲ್ಲಿ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗದ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಟ ಆರಂಭಿಸಿದ್ದರು.

ಇದನ್ನೂ ಓದಿ:

ಸಂಪ್‌ನಲ್ಲಿ ಶವ ಪತ್ತೆ

ಮನೆಯ ಆವರಣದಲ್ಲಿದ್ದ ನೀರಿನ ಸಂಪ್ ಪರಿಶೀಲಿಸಿದ ವೇಳೆ ಮಗುವಿನ ಮೃತದೇಹ ಪತ್ತೆಯಾಗಿದೆ. ಈ ಘಟನೆ ಕುಟುಂಬದವರನ್ನು ಬೆಚ್ಚಿಬೀಳಿಸಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.

ತಂದೆಯ ವಿರುದ್ಧ ಗಂಭೀರ ಆರೋಪ

ಪ್ರಾಥಮಿಕ ತನಿಖೆಯಲ್ಲಿ ಮಗುವಿನ ತಂದೆಯ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಘಟನೆಗೆ ಸಂಬಂಧಿಸಿದಂತೆ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವಿನ ಸಾವಿನ ನಿಖರ ಕಾರಣ ಹಾಗೂ ಘಟನೆಯ ಸಂಪೂರ್ಣ ಸತ್ಯಾಂಶ ತಿಳಿಯಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !