ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಕ್ಕಳು ದೊಡ್ಡವರಾಗಿದ್ದಾರೆ, ಇನ್ಯಾವುದೇ ಅನಾಹುತ ನಮ್ಮನ್ನು ಕಾಡೋದಿಲ್ಲ ಎಂದುಕೊಂಡರೆ ಅದು ಸುಳ್ಳು, ಮಕ್ಕಳನ್ನು ಎಷ್ಟು ಜೋಪಾನ ಮಾಡಿದರೂ ಸಾಲದು. ಇಲ್ಲೊಬ್ಬ 13ವರ್ಷದ ಬಾಲಕ ಬಲೂನ್ ನುಂಗಿ ಉಸಿರುಗಟ್ಟಿ ಮೃತಪಟ್ಟಿದ್ದಾನೆ. ಆತನ ಪೋಷಕರು ಹಾಗೂ ಸಂಬಂಧಿಕರು ಈಗಲೂ ಇದನ್ನು ಅರಗಿಸಿಕೊಳ್ಳಲಾಗದೆ ಶಾಕ್‌ನಲ್ಲಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಜೋಗೇನಕೊಪ್ಪ ಗ್ರಾಮದಲ್ಲಿ ಘಟನೆ ನಡೆದಿದೆ. ನವೀನ್ ನಾರಾಯಣ ಬೆಳಗಾಂವಕರ ಮೃತ ಬಾಲಕ, ಆತ 7 ನೇ ತರಗತಿ ವಿದ್ಯಾರ್ಥಿಯಾಗಿದ್ದ. ಸಂಜೆ ಮನೆಯಲ್ಲಿ ಬಲೂನ್ ಊದುತ್ತಿದ್ದಾಗ ಗಂಟಲಲ್ಲಿ ಬಲೂನ್ ಸಿಕ್ಕಿಹಾಕಿಕೊಂಡಿತ್ತು.
ಉಸಿರಾಡಲು ಹರಸಾಹಸ ಪಡುತ್ತಿದ್ದ ಆತನನ್ನು ಪೋಷಕರು ಹಾಗೂ ನೆರೆಹೊರೆಯವರು ಹಳಿಯಾಳ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅವರನ್ನು ರಕ್ಷಿಸಲು ವೈದ್ಯರ ತಂಡ ನಡೆಸಿದ ಪ್ರಯತ್ನ ವ್ಯರ್ಥವಾಯಿತು. ಆಸ್ಪತ್ರೆಯಲ್ಲಿ ದಾಖಲಾದ ಕೆಲವೇ ಗಂಟೆಗಳಲ್ಲಿ ಬಾಲಕ ಮೃತಪಟ್ಟಿದ್ದಾನೆ. ಹಳಿಯಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.