November 24, 2026
Tuesday, November 24, 2026
spot_img

ಯಲ್ಲಾಪುರದ ಹಾಸ್ಟೆಲ್‌ನಲ್ಲಿ 13 ವರ್ಷದ ಬಾಲಕ ಸಾ*ವು

ಹೊಸದಿಗಂತ ವರದಿ ಯಲ್ಲಾಪುರ:

ಪಟ್ಟಣದ ಸ್ನೇಹ ಸದನ ಹಾಸ್ಟೆಲ್‌ನಲ್ಲಿ ವಾಸವಿದ್ದ 13 ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ನವೆಂಬರ್ 22ರಂದು ನಡೆದಿದೆ.

ಜೋಯಿಡಾ ತಾಲೂಕಿನ ರಾಮನಗರದ ಚರ್ಚ್ ರಸ್ತೆಯ ನಿವಾಸಿ ಡುಮಿಂಗ ಫರ್ನಾಂಡಿಸ್ ಅವರ ಪುತ್ರ ಕ್ರಿಸ್ತನ್ (13) ಮೃತ ಬಾಲಕ. ಆತ ಯಲ್ಲಾಪುರದ ಸ್ನೇಹ ಸದನ ಹಾಸ್ಟೆಲ್‌ನಲ್ಲಿ ವಾಸವಿದ್ದು, 7ನೇ ತರಗತಿಯಲ್ಲಿ ಓದುತ್ತಿದ್ದ.

ನವೆಂಬರ್ 22ರಂದು ಮಧ್ಯಾಹ್ನ 2.04ರಿಂದ 2.26ರ ನಡುವಿನ ಅವಧಿಯಲ್ಲಿ ಹಾಸ್ಟೆಲ್‌ನ ಕೊನೆಯ ಮಹಡಿಯಲ್ಲಿ ಬಾಲಕ ಮೃತಪಟ್ಟಿರುವುದು ದೂರಿನಲ್ಲಿ ಉಲ್ಲೇಖವಾಗಿದೆ.
ಮೃತನ ತಾಯಿ ಜುವಾನಿ ಡುಮಿಂಗ ಫರ್ನಾಂಡಿಸ್ ಅವರು ಯಲ್ಲಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಗನ ಸಾವಿನಲ್ಲಿ ಯಾವುದೇ ಸಂಶಯವಿಲ್ಲ ಎಂದು ತಿಳಿಸಿದ್ದಾರೆ. ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕ್ರಮ ಕೈಗೊಂಡಿದ್ದಾರೆ.

Must Read