November 24, 2026
Tuesday, November 24, 2026
spot_img

ಕೃತಕ ಪನೀರ್ ತಯಾರಕ ಘಟಕಗಳ ಮೇಲೆ ಬೃಹತ್ ದಾಳಿ : ಪಾಮ್ ಆಯಿಲ್ ನೆಲಕ್ಕೆ ಚೆಲ್ಲಿದ ಅಧಿಕಾರಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ಕೃತಕ ಪನ್ನೀರ್‌ ತಯಾರಿಕಾ ಘಟಕದ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ಬೃಹತ್‌ ದಾಳಿ ನಡೆಸಿದ್ದು, ಕೃತಕ ಪನೀರ್‌ ತಯಾರಿಕೆಗೆ ಬಳಸುತ್ತಿದ್ದ ಲೀಟರ್‌ಗಟ್ಟಲೆ ಪಾಮ್‌ಆಯಿಲ್‌ನ್ನು ನೆಲಕ್ಕೆ ಚೆಲ್ಲಿದ್ದಾರೆ.

ಉತ್ತರ ಪ್ರದೇಶದ ರಾಯ್‌ಬರೇಲಿಯ ಹರಚಂದ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅಘೌರಾ ಸಮೀಪದಲ್ಲಿರುವ ಬಬ್ಲು ಛೇನಾ ವಾಲಾ ಎಂಬುವವರಿಗೆ ಸೇರಿದ ಪನ್ನೀರ್ ತಯಾರಿಕಾ ಘಟಕದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಕೃತಕ ಪನ್ನೀರ್ ತಯಾರಿಕೆಗೆ ಬಳಸಲು ಸಂಗ್ರಹಿಸಿಟ್ಟಿದ್ದ ಪಾಮ್ ಆಯಿಲ್ ಪತ್ತೆಯಾಗಿದೆ ಎನ್ನಲಾಗಿದೆ.

ಕೃತಕ ಪನ್ನೀರ್ ತಯಾರಿಕೆ ಮತ್ತು ಮಾರಾಟಕ್ಕೆ ನಿಷೇಧವಿದ್ದರೂ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾಯ್‌ಬರೇಲಿಯ ಪನ್ನೀರ್ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ದಾಳಿ ವೇಳೆ ಅಧಿಕಾರಿಗಳು ಪಾಮ್ ಆಯಿಲ್ ಅನ್ನು ಹೊರಹಾಕಿದ್ದು, ಲೀಟರ್‌ಗಟ್ಟಲೆ ಎಣ್ಣೆಯನ್ನು ಚೆಲ್ಲಿದ್ದಾರೆ. ಅಲ್ಲದೆ, ಪನ್ನೀರ್ ತಯಾರಿಕೆಯಲ್ಲಿ ರಾಣಿಪಾಲ್ ಕೆಮಿಕಲ್ ಹಾಗೂ ಬಟ್ಟೆಗಳನ್ನು ಹೊಳೆಯುವಂತೆ ಮಾಡಲು ಬಳಸುವ ಆಪ್ಟಿಕಲ್ ವೈಟ್ನರ್‌ನಂತಹ ರಾಸಾಯನಿಕಗಳನ್ನು ಬಳಸಲಾಗುತ್ತಿತ್ತು ಎಂಬ ಆರೋಪವೂ ಕೇಳಿಬಂದಿದೆ.

Must Read