ಹೊಸದಿಗಂತ ವರದಿ, ಕಾರವಾರ:
ಜಿಲ್ಲೆಯ ಹೊನ್ನಾವರದ ಪ್ರಭಾತ ನಗರದಲ್ಲಿರುವ ಸರಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ೧೪ ಕೋವಿಡ್ ಸೋಂಕಿನ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ಶಾಲಾ ಮಕ್ಕಳ ಆರೋಗ್ಯದದೃಷ್ಟಿಯಿಂದ ಈ ಎರಡು ಶಾಲೆಗಳಿಗೆ ಜನವರಿ ೨೦ರವರೆಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ೨೭೮ ಕೋವೀಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ.
ಶುಕ್ರವಾರ ಕಾರವಾರದಲ್ಲಿ ೮೫, ಅಂಕೋಲಾದಲ್ಲಿ ೪೧, ಕುಮಟಾ ೨೭, ಹೊನ್ನಾವರ ೫೦, ಭಟ್ಕಳ ೧೧, ಶಿರಸಿ ೧೯, ಸಿದ್ಧಾಪುರ ೧೫, ಯಲ್ಲಾಪುರ ೧೦, ಮುಂಡಗೋಡ ೧೬ ಮತ್ತು ಜೊಯಿಡಾದಲ್ಲಿ ೪ ಜನರಲ್ಲಿ ಕೋವೀಡ್ ಸೋಂಕು ದೃಡಪಟ್ಟಿದ್ದು ೩೦ ಜನರು ಸೋಂಕಿನಿಂದ ಗುಣಮಮಖರಾಗಿದ್ದಾರೆ.
ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ ೧೦೧೮ ಕ್ಕೆ ತಲುಪಿದ್ದು ಜಿಲ್ಲಾ ಕೇಂದ್ರ ಕಾರವಾರದಲ್ಲಿ ಅತಿ ಹೆಚ್ಚು ೪೭೯ ಜನರಲ್ಲಿ ಸೋಂಕು ಸಕ್ರಿಯವಾಗಿದೆ. ಅಂಕೋಲಾ ತಾಲೂಕಿನಲ್ಲಿ ಶುಕ್ರವಾರ ೪೧ ಜನರಲ್ಲಿ ಸೋಂಕು ಕಂಡು ಬಂದಿದ್ದು ಅದರಲ್ಲಿ ಪಟ್ಟಣದ ಕೆ.ಎಲ್.ಇ ಹಾಸ್ಟೆಲಿನ ೨೨ ಜನ ಮಹಿಳೆಯರಲ್ಲಿ ಕೋವೀಡ್ ಸೋಂಕು ದೃಡಪಟ್ಟಿರುವುದಾಗಿ ತಿಳಿದು ಬಂದಿದೆ.